ಶಿವಮೊಗ್ಗ LIVE
ಶಿವಮೊಗ್ಗದ ಗೋಪಾಳದಲ್ಲಿ ವೆಂಕಟೇಶ್ ಎಂಬುವವರ ಮೇಲೆ ಹಲ್ಲೆ ನಡೆದ ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ತುಂಗಾ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.
ರಂಗನಾಥ ಬಡಾವಣೆಯ ಸಲ್ಮಾನ್ (20), ಅಣ್ಣಾನಗರದ ಸೈಯದ್ ಸುಬಾನ್ (18) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಅಸ್ಲಾಂ ಎಂಬಾತನಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ.

ವಾಕಿಂಗ್ ಹೋದವರ ಮೇಲೆ ಹಲ್ಲೆ
ಪದ್ಮಾ ಟಾಕೀಸ್ ಬಳಿ ವೆಂಕಟೇಶ್ ಎಂಬುವವರು ನಾಯಿ ಹಿಡಿದುಕೊಂಡು ವಾಕಿಂಗ್ ತೆರಳುತ್ತಿದ್ದರು. ಈ ವೇಳೆ ಅವರ ಮೇಲೆ ಸಲ್ಮಾನ್, ಸೈಯದ್ ಸುಬಾನ್, ಅಸ್ಲಾಂ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿದ್ದರಿಂದ ವೆಂಕಟೇಶ್ ಅವರು ಗಾಯಗೊಂಡಿದ್ದರು.
ಇದನ್ನೂ ಓದಿ | ಶಿವಮೊಗ್ಗದಲ್ಲಿ ವಾಕಿಂಗ್ ತೆರಳಿದ್ದ ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಸಂಸದ ಸೇರಿ ಹಲವರು ಆಸ್ಪತ್ರೆಗೆ ದೌಡು
ಜಾಗಳ ಆಡುತ್ತ ನಿಂತಿದ್ದರು
ವೈನ್ ಶಾಪ್’ನಲ್ಲಿ ಕುಡಿದು ಸಲ್ಮಾನ್, ಸೈಯದ್ ಸುಬಾನ್, ಅಸ್ಲಾಂ ರಸ್ತೆಯಲ್ಲಿ ಬರುತ್ತಿದ್ದರು. ಎದುರಿಗೆ ಸಿಕ್ಕ ಫೋಟೊಗ್ರಾಫರ್ ಚಿನ್ನು ಎಂಬಾತನೊಂದಿಗೆ ಕ್ಯಾಮರಾ ಬಾಡಿಗೆ ವಿಚಾರವಾಗಿ ಜಗಳವಾಡುತ್ತಿದ್ದರು.

ಅದೆ ಸಮಯಕ್ಕೆ ವೆಂಕಟೇಶ್ ಅವರು ನಾಯಿ ಹಿಡಿದುಕೊಂಡು ವಾಕಿಂಗ್ ಬಂದಿದ್ದಾರೆ. ಮೊಬೈಲ್’ನಲ್ಲಿ ಮಾತನಾಡುತ್ತ ಬರುತ್ತಿದ್ದಾಗ, ಸಲ್ಮಾನ್, ಸೈಯದ್ ಸುಬಾನ್, ಅಸ್ಲಾಂ, ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತುಂಗಾ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಕುತ್ತಿಗೆ ಹಿಸುಕಿ ಹೆಂಡತಿಯನ್ನು ಕೊಂದ ಗಂಡ, ಎಲ್ಲಿ? ಕಾರಣವೇನು?

- ಮತ್ತೆ 91 ಸಾವಿರಕ್ಕೆ ತಲುಪಿದ ಅಡಿಕೆ ರೇಟ್ | 12 ಜನವರಿ 2026 | ಅಡಿಕೆ ಧಾರಣೆ

- ನಿಯಂತ್ರಣ ತಪ್ಪಿದ ರಾಯಲ್ ಎನ್ಫೀಲ್ಡ್ ಬೈಕ್, ಅಪಘಾತ, ಸವಾರ ಸ್ಥಳದಲ್ಲೇ ಸಾವು

- ವೈನ್ ಶಾಪ್ನಲ್ಲಿ ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದ ವ್ಯಕ್ತಿ, ಕಾರಣವೇನು?

- ‘ಇಡೀ ದೇಶವೇ ಸ್ವಾಗತಿಸಿದೆ, ಕಾಂಗ್ರೆಸ್ ನಾಯಕರು ಮಾತ್ರ ಹಗುರ ಮಾತಾಡುತ್ತಿದ್ದಾರೆ’, ಏನಿದು?

About The Editor
ನಿತಿನ್ ಆರ್.ಕೈದೊಟ್ಲು






