ರೈಲಿಗೆ ಸಿಲುಕಿ ವ್ಯಕ್ತಿ ಸಾವು, ಮೆಗ್ಗಾನ್ ಆಸ್ಪತ್ರೆ ಶೈತ್ಯಾಗಾರದಲ್ಲಿ ಮೃತದೇಹ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 27 OCTOBER 2023

SHIMOGA : ರೈಲಿಗೆ (TRAIN) ಸಿಲುಕಿ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಭದ್ರಾವತಿ ತರೀಕೆರೆ ಮಾರ್ಗದಲ್ಲಿ ಘಟನೆ ಸಂಭವಿಸಿದೆ. ಮೃತನ ಗುರುತು ಪತ್ತೆಗೆ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.

ಮೃತ ವ್ಯಕ್ತಿ ಸುಮಾರು 4 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ತಲೆಯಲ್ಲಿ 2 ಇಂಚು ಕಪ್ಪು ಕೂದಲು, ಅರ್ಧ ಇಂಚು ಕಪ್ಪು ಮೀಸೆ ಇದೆ. ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಅದರ ಮೇಲೆ ಪ್ಲಸ್ ಆಕಾರದ ನೀಲಿ ಬಣ್ಣದ ಗೆರೆಗಳಿವೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಮೃತನ ವಾರಸುದಾರರು ಇದ್ದರೆ ಶಿವಮೊಗ್ಗ ರೈಲ್ವೆ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (08182-222974, 9480802124) ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ- ಹಿಂಬದಿಯಿಂದ ಬಂದು ವಿದ್ಯಾರ್ಥಿನಿ ಕೊರಳಿಗೆ ಕೈ ಹಾಕಿದ ಅಪರಿಚಿತ, ಕಳ್ಳ ಕಳ್ಳ ಎಂದು ಕೂಗಿಕೊಳ್ಳುವಷ್ಟರಲ್ಲಿ ಮಾಯ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment