ಶಿವಮೊಗ್ಗದಲ್ಲಿ ಮನೆ ಬಾಗಿಲು ಮುರಿದು ಪಾತ್ರೆ, ಸ್ಟೌ ಕಳ್ಳತನ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIMOGA NEWS, 3 NOVEMBER 2024 : ಯಾರೂ ಇಲ್ಲದಾಗ ಮನೆ ಬಾಗಲಿನ ಲಾಕ್‌ ಮುರಿದು ಸುಮಾರು 50 ಸಾವಿರ ರೂ. ಮೌಲ್ಯದ ಪಾತ್ರೆಗಳು (Vessels) ಮತ್ತು ಹೊಟೇಲ್‌ ಸಾಮಗ್ರಿ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಬಾಪೂಜಿ ನಗರದ 5ನೇ ಅಡ್ಡರಸ್ತೆಯಲ್ಲಿರುವ ರವಿಕುಮಾರ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.

ರವಿಕುಮಾರ್‌ ಕೆಲವು ತಿಂಗಳಿಂದ ಮಂಗಳೂರಿನಲ್ಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಮಣಿಪಾಲದಲ್ಲಿ ವೃದ್ಧರ ಶುಶ್ರೂಷೆ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾಗಿ ಇಬ್ಬರು ಮನೆಯಲ್ಲಿ ಇರಲಿಲ್ಲ. ಇದೇ ಸಂದರ್ಭ ಮನೆ ಬಾಗಲಿನ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

Kote Police station building

ಇದನ್ನೂ ಓದಿ » ಬಸ್‌ ಹತ್ತಿ ತಾಯಿಯತ್ತ ತಿರುಗಿದ ಮಗಳಿಗೆ ಕಾದಿತ್ತು ಶಾಕ್

ರವಿಕುಮಾರ್‌ ಈ ಹಿಂದೆ ಹೊಟೇಲ್‌ ಉದ್ಯಮ ನಡೆಸುತ್ತಿದ್ದರು. ಹಾಗಾಗಿ ಹೊಟೇಲ್‌ನ ಟೇಬಲ್‌, ಚೇರುಗಳು, ದೊಡ್ಡ ಸ್ಟೌ, ಪಾತ್ರೆಗಳು ಮತ್ತು ಗೃಹ ಬಳಕೆ ಪಾತ್ರೆಗಳು ಮನೆಯಲ್ಲಿಟ್ಟಿದ್ದರು. ಈಚೆಗೆ ಮನೆಗೆ ಕಳ್ಳತನವಾಗಿರುವುದು ಗೊತ್ತಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Comment