ಶಿವಮೊಗ್ಗ ಜೈಲಿಗೆ ಖಾರ ಮಿಕ್ಷರ್‌ ಪ್ಯಾಕೆಟ್‌ ತಂದಿದ್ದ ಮೂವರು ಅರೆಸ್ಟ್‌, ಆಗಿದ್ದೇನು?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗೆ ಗಾಂಜಾ ಹಾಗೂ ಅನುಮಾನಾಸ್ಪದ ವಸ್ತುಗಳನ್ನು ನೀಡಲು ಯತ್ನಿಸಿದ ಮೂವರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

Shimoga-Central-Jail-Building

ಆಗಸ್ಟ್‌ 12ರ ಮಧ್ಯಾಹ್ನ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ ಮೂವರು ಸಂದರ್ಶಕರು, ವಿಚಾರಣಾಧೀನ ಕೈದಿ ಮೊಹಮ್ಮದ್ ಫರ್ದೀನ್ ಶೇಕ್ ಎಂಬಾತನನ್ನು ಭೇಟಿ ಮಾಡಲು ತೆರಳಿದ್ದರು. ಈ ವೇಳೆ ಕೈದಿಗೆ ನೀಡಲು ತಂದಿದ್ದ ಖಾರ ಮಿಕ್ಷರ್‌ನಲ್ಲಿ ಗಾಂಜಾ ಹಾಗೂ ಹರಳು ರೂಪದ ವಸ್ತುಗಳು ಪತ್ತೆಯಾಗಿವೆ. ಕೆಎಸ್‌ಐಎಸ್‌ಎಫ್ ಹಾಗೂ ಕಾರಾಗೃಹ ಸಿಬ್ಬಂದಿ ತಪಾಸಣೆ ವೇಳೆ ಗಾಂಜಾ ಹಾಗೂ ಇತರೆ ವಸ್ತುಗಳು ಸಿಕ್ಕಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

ಜೈಲು ಮುಖ್ಯ ಅಧೀಕ್ಷಕ ಡಾ. ರಂಗನಾಥ್‌ ಅವರ ದೂರಿನ ಹಿನ್ನಲೆ ಸಯ್ಯದ್‌ ಮುಸೈಲ್‌, ಮೊಹಮ್ಮದ್‌ ಮಿಕ್ಕದ್‌, ಮೊಹಮ್ಮದ್‌ ಫೌಜಾನ್‌ ಎಂಬುವವರ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ