ಶಿವಮೊಗ್ಗದ ಯುವತಿ ಹೆಸರಿನಲ್ಲಿ ವಾಟ್ಸಪ್‌ ಗ್ರೂಪ್‌, ಇನ್‌ಸ್ಟಾಗ್ರಾಂ ಅಕೌಂಟ್‌, ಅದರಲ್ಲಿತ್ತು ಅಶ್ಲೀಲ ಪೋಟೊ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 17 MARCH 2024

SHIMOGA : ಯುವತಿಯೊಬ್ಬಳ ಹೆಸರಿನಲ್ಲಿ ಅಪರಿಚಿತ ಮೊಬೈಲ್‌ ನಂಬರ್‌ನಿಂದ ವಾಟ್ಸಪ್‌ ಗ್ರೂಪ್‌ ಮತ್ತು ಇನ್‌ಸ್ಟಾಗ್ರಾಂ ಖಾತೆ ಕ್ರಿಯೇಟ್‌ ಮಾಡಿ ಆಕೆಯ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಅಪ್‌ಲೋಡ್‌ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ?

ಶಿವಮೊಗ್ಗ ಜಿಲ್ಲೆಯ ಯುವತಿಯೊಬ್ಬಳ (ಹೆಸರು, ಊರು ಗೌಪ್ಯ) ಹೆಸರಿನಲ್ಲಿ ಅಪರಿಚಿತ ನಂಬರ್‌ನಿಂದ ವಾಟ್ಸಪ್‌ ಗ್ರೂಪ್‌ ಕ್ರಿಯೇಟ್‌ ಮಾಡಲಾಗಿದೆ. ಆಕೆಯ ಪರಿಚಿತರನ್ನು ಗ್ರೂಪ್‌ಗೆ ಸೇರಿಸಲಾಗಿದೆ. ಆಕೆಯ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಗ್ರೂಪ್‌ನಲ್ಲಿ ಹರಿಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಗ್ರೂಪ್‌ನಲ್ಲಿದ್ದ ಆಕೆಯ ಸ್ನೇಹಿತರು ಕರೆ ಮಾಡಿ ವಿಚಾರ ತಿಳಿಸಿದ್ದರು. ಇನ್ನು, ಇನ್‌ಸ್ಟಾಗ್ರಾಂನಲ್ಲಿಯು ಆಕೆಯ ಹೆಸರಿನಲ್ಲಿ ಖಾತೆ ಸೃಷ್ಟಿಸಿ, ಎಡಿಟ್‌ ಮಾಡಿದ ಫೋಟೊ ಅಪ್‌ಲೋಡ್‌ ಮಾಡಿ, ಅಶ್ಲೀಲ ಮೆಸೇಜ್‌ ಮತ್ತು ಆಕೆಯ ಮೊಬೈಲ್‌ ನಂಬರ್‌ ಪ್ರಕಟಿಸಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ.

ಸಿಕ್ಕಿಬಿದ್ದರೆ ಜೈಲು ಗ್ಯಾರಂಟಿ

ಕೃತ್ಯ ಎಸಗಿದಾತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅನುಮತಿ ಇಲ್ಲದೆ ಪೋಟೊ ಬಳಕೆ ಅಪರಾಧ. ಯಾರದ್ದೋ ಫೋಟೊ ಬಳಕೆ, ನಕಲಿ ಖಾತೆಗಳನ್ನು ಸೃಷ್ಟಿಸುವಂತಿಲ್ಲ. ಕಾಯ್ದೆ ಸೆಕ್ಷನ್‌ 66 ಸಿ, 66 ಡಿ, 67 ಎ ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದ ಮಹಿಳೆಯರೆ ಹುಷಾರ್‌, ನಡು ರಸ್ತೆಯಲ್ಲಿ ನಿಮಗೂ ಸಿಗಬಹುದು ಈ ನಯ ವಂಚಕರು, ಕೇಸ್‌ ದಾಖಲು

ಆರೋಪ ಸಾಬೀತಾದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿದವನಿಗೆ ಸೆಕ್ಷನ್‌ 66ಸಿ ಅಡಿ ಮೂರು ವರ್ಷ ಜೈಲು ಮತ್ತು ಒಂದು ಲಕ್ಷ ರೂ.ವರೆಗೆ ದಂಡ ಮತ್ತು 66 ಡಿ ಅಡಿ ಮೂರು ವರ್ಷ ಜೈಲು, ಒಂದು ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಐಟಿ ಕಾಯ್ದೆ ಸೆಕ್ಷನ್‌ 67 ಅಡಿ ಆರೋಪ ಸಾಬೀತಾದಲ್ಲಿ ಮೂರು ವರ್ಷ ಜೈಲು ಮತ್ತು ಐದು ಲಕ್ಷ ರೂ.ವರೆಗೆ ದಂಡ ವಿಧಿಸಬಹುದಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 17, 2024

ಸೇತುವೆಯಿಂದ ಕೆಳಗೆ ಹಾರಿದ ಖಾಸಗಿ ಬಸ್‌, ಹೇಗಾಯ್ತು ಘಟನೆ?

ಸೇತುವೆಯಿಂದ ಕೆಳಗೆ ಹಾರಿದ ಖಾಸಗಿ ಬಸ್‌, ಹೇಗಾಯ್ತು ಘಟನೆ?

BREAKING NEWS – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ

BREAKING NEWS – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕರಡಿ

ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

ಅಡಿಕೆ ಕಳ್ಳರ ಹಾವಳಿ, ರಾತ್ರೋರಾತ್ರಿ ಲಕ್ಷ ಲಕ್ಷದ ಅಡಿಕೆ ನಾಪತ್ತೆ, ಎಲ್ಲಿ? ಏನಾಯ್ತು?

ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್‌ ಶಾಕ್‌, ಆಗಿದ್ದೇನು?

ಅತ್ತೆ ಮನೆಯಿಂದ ಶಿವಮೊಗ್ಗದ ಮನೆಗೆ ಮರಳಿದ ವ್ಯಕ್ತಿಗೆ ಬಿಗ್‌ ಶಾಕ್‌, ಆಗಿದ್ದೇನು?

ಇವತ್ತೂ ಮಳೆ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಶಿವಮೊಗ್ಗದ ಹವಾಮಾನ ವರದಿ

ಇವತ್ತೂ ಮಳೆ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಶಿವಮೊಗ್ಗದ ಹವಾಮಾನ ವರದಿ

ಇವತ್ತು ಬ್ರಹ್ಮ ಮುಹೂರ್ತ ಯಾವಾಗಿದೆ? ಯಮಗಂಡ ಕಾಲ ಎಷ್ಟೊತ್ತಿಗೆ? ಇಂದಿನ ಪಂಚಾಂಗ

ಇವತ್ತು ಬ್ರಹ್ಮ ಮುಹೂರ್ತ ಯಾವಾಗಿದೆ? ಯಮಗಂಡ ಕಾಲ ಎಷ್ಟೊತ್ತಿಗೆ? ಇಂದಿನ ಪಂಚಾಂಗ

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ದುರಸ್ತಿ ವೇಳೆ ಲೈನ್‌ ಮ್ಯಾನ್‌ಗೆ ಕರೆಂಟ್‌ ಶಾಕ್‌, ಸ್ಥಳದಲ್ಲೆ ಸಾವು

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಶಿವಮೊಗ್ಗದ ವಾಹನ ಸವಾರರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಮಹತ್ವದ ಪ್ರಕಟಣೆ, ಏನದು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

ಉಪನ್ಯಾಸಕ ಸುರೇಶ್‌ ನಿಗೂಢ ಸಾವು ಕೇಸ್‌, ಶಿವಮೊಗ್ಗ SP ಫಸ್ಟ್‌ ರಿಯಾಕ್ಷನ್‌, ಏನಂದ್ರು?

Leave a Comment