ಶಿವಮೊಗ್ಗ : ಒಂದು ಲೋಡ್ ಗೋಧಿ (Wheat) ಕಳುಹಿಸುವುದಾಗಿ ನಂಬಿಸಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಗುಜರಾತ್ ಮೂಲದ ವ್ಯಕ್ತಿಯೊಬ್ಬ 7 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಶಿವಮೊಗ್ಗದ ಮನ್ಸೂರ್ ಎಂಬುವವರು ಭತ್ತ, ಜೋಳ, ಗೋಧಿ (Wheat) ವ್ಯಾಪಾರ ಮಾಡುತ್ತಿದ್ದಾರೆ. ಗುಜರಾತ್ ಮೂಲದ ಶೇಖ್ ಮೊಹಮ್ಮದ್ ಫರೀದ್ ಎಂಬಾತ ಮನ್ಸೂರ್ ಅವರಿಗೆ ಪರಿಚಯವಾಗಿದ್ದು, ಗೋಧಿ ಕೊಡಿಸುವುದಾಗಿ ನಂಬಿಸಿದ್ದ. ಒಮ್ಮೆ ಆತ ಕರೆ ಮಾಡಿ ಒಂದು ಲೋಡ್ ಗೋಧಿ ಕಳುಹಿಸುವುದಾಗಿ ತಿಳಿಸಿ ಮೊದಲಿಗೆ 2.50 ಲಕ್ಷ ರೂ. ಹಣ ಕಳುಹಿಸುವಂತೆ ತಿಳಿಸಿದ್ದ.
ಆತನ ಮಾತು ನಂಬಿ ಉದ್ಯಮಿ ಮನ್ಸೂರ್ ಹಣ ಕಳುಹಿಸಿದ್ದರು. ಪುನಃ ಕರೆ ಮಾಡಿದ್ದ ಶೇಖ್ ಮೊಹಮ್ಮದ್ ಫರೀದ್ 4.50 ಲಕ್ಷ ರೂ. ಹಣ ವರ್ಗಾಯಿಸುವಂತೆ ತಿಳಿಸಿದ್ದ. ಒಟ್ಟು 7 ಲಕ್ಷ ರೂ. ಹಣ ವರ್ಗಾಯಿಸಿದರು ಗೋಧಿ ಲೋಡ್ ಬಾರದಿದ್ದರಿಂದ ಮನ್ಸೂರ್ ಅವರು ಶೇಖ್ ಮೊಹಮ್ಮದ್ಗೆ ಕರೆ ಮಾಡಿದ್ದರು. ಆಗ ‘ಹಣವನ್ನು ಕೊಡುವುದಿಲ್ಲ, ಗೋಧಿಯನ್ನು ಕಳುಹಿಸುವುದಿಲ್ಲʼ ಎಂದು ಆತ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ದೂರು ನೀಡಿದ್ದಾರೆ.

ಇದನ್ನೂ ಓದಿ » ಪ್ರತಿದಿನ 7 ರಿಂದ 8 ಸಾವಿರ ರೂ. ಲಾಭ, ಮನೆಯಲ್ಲೆ ಕುಳಿತು ಗಳಿಸಬಹುದು ಹಣ, ಮುಂದೇನಾಯ್ತು?
