SHIVAMOGGA LIVE NEWS, 1 JANUARY 2025
ಹೊಸನಗರ : ಪತಿಯ ಸಾವಿನ ವಿಷಯ ತಿಳಿದು ಪತ್ನಿ (Wife) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸನಗರ ತಾಲೂಕು ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಾ ಗ್ರಾಮದ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡು ಪತಿ ಸಾವು
ಡಿ.31ರಂದು ಶಿಕಾರಿಪುರ ತಾಲೂಕಿನಲ್ಲಿ ಬೈಕ್ ಅಪಘಾತದಲ್ಲಿ ಮಂಜುನಾಥ್ (25) ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಮಂಜುನಾಥ್ ಮೃತಪಟ್ಟಿದ್ದರು.
ನೇಣು ಬಿಗಿದುಕೊಂಡ ಪತ್ನಿ
ಪತಿ ಮಂಜುನಾಥ್ ಮೃತಪಟ್ಟ ವಿಷಯ ತಿಳಿದು ಪತ್ನಿ ಅಮೃತಾ (21) ನೇಣ ಬಿಗಿದುಕೊಂಡಿದ್ದಾರೆ. ತಮ್ಮ ಮನೆ ಹಿಂಬದಿಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗಿದೆ. ಹೊಸನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಇವತ್ತು ಏನೇನಾಯ್ತು? ಇಲ್ಲಿದೆ ಫಟಾಫಟ್ ನ್ಯೂಸ್