ಶಿವಮೊಗ್ಗದ ಮಹಿಳೆಗೆ ದೆಹಲಿ ವಿಮಾನ ನಿಲ್ದಾಣದಿಂದ ಬಂತು ಫೋನ್‌, ಆಮೇಲೆ ಕಾದಿತ್ತು ಬಿಗ್‌ ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 21 DECEMBER 2023

SHIMOGA : ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಐ-ಫೋನ್‌ ಮತ್ತು ಲ್ಯಾಪ್‌ ಟಾಪ್‌ ಗಿಫ್ಟ್‌ ಕಳುಹಿಸುವುದಾಗಿ ನಂಬಿಸಿ ಶಿವಮೊಗ್ಗದ ಮಹಿಳಾ ಉದ್ಯೋಗಿಯೊಬ್ಬರಿಗೆ 7.61 ಲಕ್ಷ ರೂ. ವಂಚಿಸಲಾಗಿದೆ. 2023ರ ಜೂನ್‌ ತಿಂಗಳಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾದ ಅಪರಿಚಿತರು ಮಹಿಳೆಗೆ ಗಿಫ್ಟ್‌ ಕಳುಹಿಸುವುದಾಗಿ ನಂಬಿಸಿದ್ದರು.

ಜುಲೈ ತಿಂಗಳಲ್ಲಿ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿ ಪ್ರಿಯಾಂಕ ಎಂದು ಪರಿಚಯಿಸಿಕೊಂಡು ಮಹಿಳೆಯೊಬ್ಬಳು ಕರೆ ಮಾಡಿದ್ದಳು. ಅಮೆರಿಕದಿಂದ ಐ – ಫೋನ್‌ ಮತ್ತು ಲ್ಯಾಪ್‌ ಟಾಪ್‌ ಬಂದಿದೆ. ಇದರ ಹ್ಯಾಂಡಲಿಂಗ್‌ ಚಾರ್ಜ್‌, ಫಾರಿನ್‌ ಕರೆನ್ಸಿ ಹಣ ಬದಲಾವಣೆ ಎಂದು ನಂಬಿಸಿ ಶಿವಮೊಗ್ಗದ ಮಹಿಳೆಯಿಂದ ಹಂತ ಹಂತವಾಗಿ 7.61 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ವಂಚನೆಗೊಳಗಾದ ಅರಿವಾಗುತ್ತಿದ್ದಂತೆ ಮಹಿಳೆ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ‌

ಇದನ್ನೂ ಓದಿ – ಶಿವಮೊಗ್ಗದಲ್ಲಿ ಕರೋನ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ, ಇಲ್ಲಿದೆ 6 ಪಾಯಿಂಟ್‌ ಸೂಚನೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment