ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS
SHIMOGA | ಅಡುಗೆ ಮನೆಯಲ್ಲಿ ಗೃಹಿಣಿಯ ಬರ್ಬರ ಹತ್ಯೆ (MURDER) ಪ್ರಕರಣ ಸಂಬಂಧ ಆಕೆಯ ಪೋಷಕರು ದೂರು ನೀಡಿದ್ದಾರೆ. ಗಂಡನೆ ನಡುರಾತ್ರಿ ಜಗಳವಾಡಿ ಚಾಕುವಿನಿಂದ ಕತ್ತು ಸೀಳಿದ್ದಾನೆ ಎಂದು ಆರೋಪಿಸಲಾಗಿದೆ.
ವಿದ್ಯಾನಗರದ ಪ್ರಿಯಾಂಕಾ ಲೇಔಟ್’ನ ಮನೆಯಲ್ಲಿ ಮಂಜುಳಾ (33) ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಅಡುಗೆ ಮನೆಯಲ್ಲಿ ಮಂಜುಳಾ ಅವರ ಮೃತದೇಹವು ರಕ್ತದ ಮಡುವಿನಲ್ಲಿ ಇತ್ತು. ಮಂಜುಳಾ ಅವರ ಪತಿ ದಿನೇಶ್ (42) ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಡುರಾತ್ರಿ ಗಂಡ, ಹೆಂಡತಿ ಜಗಳ
ಮೆಸ್ಕಾಂನಲ್ಲಿ ದಿನೇಶ್ ಸೀನಿಯರ್ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2010ರಲ್ಲಿ ಮಂಜುಳಾ ಎಂಬುವವರೊಂದಿಗೆ ವಿವಾಹವಾಗಿದ್ದರು. ಸೆ.7ರ ಬೆಳಗಿನ ಜಾವ ಮಂಜುಳಾ ಮತ್ತು ದಿನೇಶ್ ನಡುವೆ ಜಗಳವಾಗಿದೆ. ಈ ವೇಳೆ ದಿನೇಶ್ ಚಾಕುವಿನಿಂದ ಮಂಜುಳಾ ಅವರ ಎದೆ ಮತ್ತು ಕುತ್ತಿಗೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವ ಉಂಟಾಗಿ ಮಂಜುಳಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.
‘ಮಕ್ಕಳು ಹೋಗಿ ನೋಡಿದಾಗ’
ದಂಪತಿಗೆ 11 ವರ್ಷ ಮತ್ತು 6 ವರ್ಷದ ಹೆಣ್ಣು ಮಕ್ಕಳಿದ್ದಾರೆ. ನಡುರಾತ್ರಿ ಅಡುಗೆ ಮನೆಯಲ್ಲಿ ಗಂಡ, ಹೆಂಡತಿ ಜೋರಾಗಿ ಜಗಳವಾಡುತ್ತಿದ್ದಾಗ ಮಕ್ಕಳು ಎಚ್ಚರವಾಗಿ ಹೋಗಿ ನೋಡಿದ್ದಾರೆ. ಈ ವೇಳೆ ದಿನೇಶ್, ಹೋಗಿ ಮಲಗುವಂತೆ ಮಕ್ಕಳಿಗೆ ತಿಳಿಸಿದ್ದಾನೆ. ಕೆಲವೇ ಹೊತ್ತಿನಲ್ಲಿ ಅಡುಗೆ ಮನೆಯಲ್ಲಿ ಜೋರಾದ ಶಬ್ದ ಕೇಳಿದೆ. ಆಗ ಮಕ್ಕಳು ಹೋಗಿ ನೋಡಿದಾಗ ಮಂಜುಳಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮಕ್ಕಳು ಕೂಡಲೆ ತಮ್ಮ ಅಜ್ಜಿಗೆ ಕರೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಆಗಾಗ ಜಗಳವಾಡುತ್ತಿದ್ದರು’
ಮಂಜುಳಾ ಹತ್ಯೆ ಸಂಬಂಧ ಆಕೆಯ ಸಹೋದರ ರಂಗನಾಥ ಅವರು ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ‘ಗಂಡ ಸರಿಯಾಗಿ ಮನೆಗೆ ಬರುವುದಿಲ್ಲ. ರಜೆ ಅವಧಿಯಲ್ಲಿಯು ಕೆಲಸವಿದೆ ಎಂದು ಹೋಗುತ್ತಿದ್ದರು. ಅವರು ಅನೈತಿಕ ಸಂಬಂಧ ಹೊಂದಿರುವ ಕುರಿತು ಅನುಮಾನವಿದೆ. ಈ ಬಗ್ಗೆ ಸರಿಯಾಗಿ ಏನನ್ನೂ ಹೇಳುತ್ತಿಲ್ಲ’ ಎಂದು ಮಂಜುಳಾ ಆಗಾಗ ದೂರುತ್ತಿದ್ದಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕುಟುಂಬದರು, ಅನುಸರಿಸಿಕೊಂಡು ಹೋಗುವಂತೆ ತಿಳಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ದಿನೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತುಂಗಾ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಲು ಕ್ಲಿಕ್ ಮಾಡಿ – ಮುಚ್ಚಿದಂತೆ ಇದ್ದ ಬಾಗಿಲ ಬೀಗ ತೆಗೆಯಲು ಹೋದಾಗ ಇಂಟರ್ ಲಾಕ್ ಕಟ್, ಒಳ ನೋಡಿದಾಗ ಕಾದಿತ್ತು ಶಾಕ್
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422