ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 26 JUNE 2024
SAGARA : ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯಕ್ಷಗಾನ (Yakshagana) ಭಾಗವತ ವೇಣುಗೋಪಾಲ್ (35) ಕೊನೆಯುಸಿರೆಳೆದಿದ್ದಾರೆ.
ಪುರಪ್ಪೆಮನೆ ಕೆಳಮನೆ ಗ್ರಾಮದ ವೇಣುಗೋಪಾಲ್ ಅವರು ಸೋಮವಾರ ರಾತ್ರಿ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಆನಂದಪುರ ಸಮೀಪದ ಗಡಿಕಟ್ಟೆಯಲ್ಲಿ ಹೋರಿ ಅಡ್ಡಬಂದಿದೆ. ಈ ಸಂದರ್ಭ ಬೈಕ್‌ನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ.

ಇವರು ಕೆಳಮನೆ ಮೇಳದ ಭಾಗವತ ಕೆ.ಜಿ.ರಾಮರಾವ್ ಅವರ ಪುತ್ರ. ಇವರೂ ಸಹ ಸಿಗಂದೂರು ಮೇಳದ ಪ್ರಮುಖ ಭಾಗವತರಾಗಿದ್ದರು. ಸಾಲಿಗ್ರಾಮ ಮೇಳ, ಮಂದಾರ್ತಿ ಮೇಳ ಸೇರಿದ ಹಲವು ಮೇಳಗಳಲ್ಲಿ ಭಾಗವತರಾಗಿದ್ದರು. ವಿವಿಧ ರಾಗಗಳನ್ನು ಸ್ಪಷ್ಟವಾಗಿ ಹಾಡುವ ಉತ್ತಮ ಕಂಠ ಹೊಂದಿದ್ದರು.
ಇದನ್ನೂ ಓದಿ – ಹಾಲಿನ ಕ್ಯಾಂಟರ್, ಓಮ್ನಿ ಕಾರು ಮುಖಾಮುಖಿ ಡಿಕ್ಕಿ, ಒಬ್ಬ ಸಾವು
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು





