ಆನಂದಪುರ ಬಳಿ ಅಪಘಾತದಲ್ಲಿ ತೀವ್ರ ಗಾಯಗೊಂಡು ಯಕ್ಷಗಾನ ಭಾಗವತ ಸಾವು

SHIVAMOGGA LIVE NEWS | 26 JUNE 2024

SAGARA : ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯಕ್ಷಗಾನ (Yakshagana) ಭಾಗವತ ವೇಣುಗೋಪಾಲ್ (35) ಕೊನೆಯುಸಿರೆಳೆದಿದ್ದಾರೆ.

ಪುರಪ್ಪೆಮನೆ ಕೆಳಮನೆ ಗ್ರಾಮದ ವೇಣುಗೋಪಾಲ್‌ ಅವರು ಸೋಮವಾರ ರಾತ್ರಿ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ ಆನಂದಪುರ ಸಮೀಪದ ಗಡಿಕಟ್ಟೆಯಲ್ಲಿ ಹೋರಿ ಅಡ್ಡಬಂದಿದೆ. ಈ ಸಂದರ್ಭ ಬೈಕ್‌ನಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ.

Yakshagana-Bhagavatha-Venugopal-succumbed-in-an-accident.

ಇವರು ಕೆಳಮನೆ ಮೇಳದ ಭಾಗವತ ಕೆ.ಜಿ.ರಾಮರಾವ್ ಅವರ ಪುತ್ರ. ಇವರೂ ಸಹ ಸಿಗಂದೂರು ಮೇಳದ ಪ್ರಮುಖ ಭಾಗವತರಾಗಿದ್ದರು. ಸಾಲಿಗ್ರಾಮ ಮೇಳ, ಮಂದಾರ್ತಿ ಮೇಳ ಸೇರಿದ ಹಲವು ಮೇಳಗಳಲ್ಲಿ ಭಾಗವತರಾಗಿದ್ದರು. ವಿವಿಧ ರಾಗಗಳನ್ನು ಸ್ಪಷ್ಟವಾಗಿ ಹಾಡುವ ಉತ್ತಮ ಕಂಠ ಹೊಂದಿದ್ದರು.

Kalleshwara-Enterprises.webp

ಇದನ್ನೂ ಓದಿ – ಹಾಲಿನ ಕ್ಯಾಂಟರ್‌, ಓಮ್ನಿ ಕಾರು ಮುಖಾಮುಖಿ ಡಿಕ್ಕಿ, ಒಬ್ಬ ಸಾವು

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment