
ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021
ಹೊಳೆಯಲ್ಲಿ ಸ್ನಾನಕ್ಕೆ ಹೋಗಿ ಕಣ್ಮರೆಯಾಗಿದ್ದ ಯುವಕ ಶವವಾಗಿ ಪತ್ತೆಯಗಿದ್ದಾನೆ. ಯುವಕ ಮುಳುಗಿದ್ದಾನೆ ಎನ್ನಲಾದ ಸ್ಥಳದಿಂದ ಸನಿಹದಲ್ಲೆ ಮೃತದೇಹ ಪತ್ತೆಯಾಗಿದೆ.
ಮೂರನೆ ಪ್ಯಾರಾ ಈ ಜಾಹೀರಾತಿನ ಕೆಳಗಿದೆ

ಹೊಳೆಭೈರನಹಳ್ಳಿ ಗ್ರಾಮದ ಅರುಣ್ (15) ಮೃತನು. ಸೋಮವಾರ ತನ್ನ ಸ್ನೇಹಿತರೊಂದಿಗೆ ಅರುಣ್ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ ಎಂದು ತಿಳಿದು ಬಂದಿದೆ. ಈತ ಈಜಲು ಬಾರದೆ ಹೊಳೆಯಲ್ಲಿ ಮುಳುಗಿರುವ ಶಂಕೆ ಇದೆ.
ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರು. ಇವತ್ತು ಮಧ್ಯಾಹ್ನ ಮೃತದೇಹ ಪತ್ತೆಯಗಿದೆ. ಈತ ಹೊಳೆಭೈರನಹಳ್ಳಿ ನಿವಾಸಿಗಳಾದ ಅಣ್ಣಪ್ಪ, ಗಂಗಮ್ಮ ದಂಪತಿಯ ಪುತ್ರ.
ಹೊಳೆಹೊನ್ನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com





