ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 DECEMBER 2023
SHIMOGA : ಬಜಾಜ್ ಕವಾಸಕಿ ಬೈಕ್ ಅನ್ನು ಯಮಹಾ ಆರ್ಎಕ್ಸ್ 100 ರೀತಿ ಮಾರ್ಪಾಡು ಮಾಡಿ, ಕರ್ಕಶ ಹಾರನ್ ಅಳವಡಿಸಿಕೊಂಡು ಓಡಿಸುತ್ತಿದ್ದ ಯುವಕನಿಗೆ ಶಿವಮೊಗ್ಗದ ನ್ಯಾಯಾಲಯ ದಂಡ ವಿಧಿಸಿದೆ.
ಆರ್ಎಕ್ಸ್ 100 ರೀತಿ ಕವಾಸಕಿ
ಆರ್.ಎಂ.ಎಲ್ ನಗರದ ಧನಂಜಯ ಎಂಬಾತ ಬಜಾಜ್ ಕವಾಸಕಿ ಬೈಕ್ ಅನ್ನು ಆರ್ಎಕ್ಸ್ 100 ರೀತಿ ಮಾರ್ಪಾಡು ಮಾಡಿಸಿದ್ದ. ಇದಕ್ಕೆ ಕರ್ಕಶ ಶಬ್ದ ಬರುವ ಹಾರನ್ ಕೂಡ ಅಳವಡಿಸಿದ್ದ. ಈ ಕುರಿತು ಸಾರ್ವಜನಿಕರಿಂದ ದೂರು ಬಂದಿತ್ತು. ಬೈಕ್ ಪತ್ತೆ ಹಚ್ಚಿದ ಸಂಚಾರ ಠಾಣೆ ಪಿಎಸ್ಐ ನವೀನ್ ಕುಮಾರ್ ಮಠಪತಿ ಮಾಲೀಕ ಧನಂಜಯನ ವಿರುದ್ಧ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ 3ನೇ ಎಸಿಎಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ಧನಂಜಯನಿಗೆ 16,500 ರೂ. ದಂಡ ವಿಧಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಬೈಕ್ ಶೋ ರೂಂನಲ್ಲಿ ಬೆಂಕಿ, 20ಕ್ಕೂ ಹೆಚ್ಚು ಬೈಕ್ಗಳಿಗೆ ಹಾನಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422