ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 DECEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
WHATSAPP NEWS | ಬಳಕೆದಾರರ ಅನುಕೂಲಕ್ಕಾಗಿ ವಾಟ್ಸಪ್ ಮೂರು ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಮೂರು ಆಪ್ಷನ್ಗಳು ಸದ್ಯ ಟೆಸ್ಟಿಂಗ್ ಹಂತದಲ್ಲಿವೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಯಾವೆಲ್ಲ ಫೀಚರ್ ರಿಲೀಸ್ ಆಗುತ್ತಿದೆ?
ಫೀಚರ್ 1 : ಚಾನಲ್ ಅಲರ್ಟ್
ವಾಟ್ಸಪ್ ಚಾನಲ್ಗಳ ಈಗಾಗಲೆ ಫೇಮಸ್ ಆಗಿವೆ. ಆದರೆ ಚಾನಲ್ ಓನರ್ಗಳು ವಾಟ್ಸಪ್ನ ಗೈಡ್ಲೈನ್ ಧಿಕ್ಕರಿಸಿದರೆ ಎಚ್ಚರಿಸುವ ವ್ಯವಸ್ಥೆ ಇರಲಿಲ್ಲ. ಈಗ ಚಾನಲ್ ಅಲರ್ಟ್ ಮೂಲಕ ವಾಟ್ಸಪ್ ಚಾನಲ್ ಓನರ್ಗಳಿಗೆ ಎಚ್ಚರಿಕೆ ನೀಡಲು ಯೋಜಿಸಲಾಗಿದೆ. ಈ ಮೂಲಕ ವಾಟ್ಸಪ್ ಕಮ್ಯೂನಿಟಿ ಸ್ಟಾಂಡರ್ಡ್ ಗೈಡ್ಲೈನ್ ಪಾಲಿಸಿಕೊಂಡು ಚಾನಲ್ ನಡೆಸಲು ಅನುಕೂಲವಾಗಲಿದೆ.
ಫೀಚರ್ 2 : ಹಿಡನ್ ನ್ಯಾವಿಗೇಷನ್ ಬಾರ್
ವಾಟ್ಸಪ್ ಸ್ಕ್ರಿನ್ನ ಬಲ ಭಾಗದಲ್ಲಿ ಈವರೆಗೂ ನ್ಯಾವಿಗೇಷನ್ ಬಾರ್ ಕಾಣುತಿತ್ತು. ಇನ್ಮುಂದೆ ಈ ಅದು ಮಾಯವಾಗಲಿದೆ. ಹಾಗಾಗಿ ಚಾಟ್ಸ್, ಕಮ್ಯೂನಿಟಿ ಗ್ರೂಪ್, ಚಾನಲ್ ಅಪ್ಡೇಟ್ ಎಲ್ಲವು ಇನ್ನಷ್ಟು ಬೋಲ್ಡ್ ಮತ್ತು ದೊಡ್ಡದಾಗಿ ಕಾಣಲಿದೆ.
ಫೀಚರ್ 3 : ಮೆಸೇಜ್ ಹುಡುಕಲು ದಿನಾಂಕ
ಹಳೆಯ ಅಥವಾ ಪ್ರತ್ಯೇಕ ಮೆಸೇಜ್ ಹುಡುಕಲು ಇನ್ಮುಂದೆ ಸ್ಕ್ರಾಲ್ ಮಾಡಿಕೊಂಡು ಕಷ್ಟಪಡಬೇಕಿಲ್ಲ. ವಾಟ್ಸಪ್ ಚಾಟ್ಗೆ ಹೋಗಿ ದಿನಾಂಕ ನಮೂದಿಸಿದರೆ ಸಾಕು. ಆ ದಿನದ ಎಲ್ಲ ಮೆಸೇಜ್ಗಳು ಪ್ರತ್ಯಕ್ಷವಾಗಲಿದೆ. ಸದ್ಯ ಈ ಮೂರು ಫೀಚರ್ಗಳು ಟೆಸ್ಟಿಂಗ್ ಹಂತದಲ್ಲಿದ್ದು ಸದ್ಯದಲ್ಲೇ ವಾಟ್ಸಪ್ ಅಪ್ಡೇಟ್ನಲ್ಲಿ ಕಾಣಿಸಲಿದೆ.
ಇದನ್ನೂ ಓದಿ – ಇನ್ಮುಂದೆ ವಾಟ್ಸಪ್ನಲ್ಲಿ VOICE MESSAGEಗೂ ಬರಲಿದೆ VIEW ONCE ಆಪ್ಷನ್, ಏನಿದು? ಬಳಸೋದು ಹೇಗೆ?