ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 2 SEPTEMBER 2024 : ಹೊಟೇಲ್ ರಿವ್ಯು (Review) ಬರೆದು ಹಣ ಸಂಪಾದಿಸಬಹುದು ಎಂದು ನಂಬಿಸಿ ಯುವಕನೊಬ್ಬನಿಗೆ 11.79 ಲಕ್ಷ ರೂ ಹಣ ವಂಚಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗದ ಯುವಕನಿಗೆ (ಹೆಸರು ಗೌಪ್ಯ) ಟೆಲಿಗ್ರಾಂ ಆಪ್ನಲ್ಲಿ ರಿವ್ಯು ಬರೆದು ಹಣ ಸಂಪಾದಿಸುವ ಕುರಿತು ಲಿಂಕ್ ಬಂದಿತ್ತು. ಇದನ್ನು ನಂಬಿ ರಿವ್ಯು ಬರೆಯುತ್ತಿದ್ದಂತೆ ಯುವಕನ ಬ್ಯಾಂಕ್ ಖಾತೆಗೆ 720 ರೂ. ನಗದು ಬಂದಿತ್ತು. ಆಮೇಲೆ 10 ಸಾವಿರ ರೂ. ಹಣ ಡೆಪಾಸಿಟ್ ಮಾಡಿ ಹೊಟೇಲ್ ರಿವ್ಯು ಬರೆದರೆ 7230 ರೂ. ಕಮಿಷನ್ ದೊರೆಯಲಿದೆ ಎಂಬ ಟಾಸ್ಕ್ ನೀಡಲಾಯಿತು. ರಿವ್ಯು ಬರೆಯುತ್ತಿದ್ದಂತೆ ಯುವಕನ ಖಾತೆಗೆ ಡೆಪಾಸಿಟ್ ಹಣ 10 ಸಾವಿರ ರೂ., ಕಮಿಷನ್ ಹಣ 7230 ರೂ. ಸೇರಿ ಒಟ್ಟು 17,230 ರೂ. ಬಂದಿತ್ತು.
ನಂತರ ಯುವಕನಿಂದ ಆಗಸ್ಟ್ 9 ರಿಂದ 20ರವರೆಗೆ ವಿವಿಧ ಹಂತದಲ್ಲಿ 11.29 ಲಕ್ಷ ರೂ. ಹಣ ಹಾಕಿಸಿಕೊಂಡು, ವಿವಿಧ ಟಾಸ್ಕ್ ನೀಡಿ ಲಾಭಾಂಶ ನೀಡದೆ ವಂಚಿಸಲಾಗಿದೆ. ಟ್ರಾವೆಲ್ ಪಾರ್ಟ್ನರ್ ಎಂಬ ಹೆಸರಿನಲ್ಲಿ ವಂಚಿಸಲಾಗಿದೆ ಎಂದು ಆರೋಪಿಸಿ ಯುವಕ ದೂರು ನೀಡಿದ್ದಾನೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇒ ಶಿವಮೊಗ್ಗ ಜೈಲಿನಲ್ಲಿ ಬೀಡಿ, ಸಿಗರೇಟಿಗಾಗಿ ಕೈದಿಗಳ ಪ್ರತಿಭಟನೆ