ಶಿವಮೊಗ್ಗ ಲೈವ್
SORABA NEWS, 18 OCTOBER 2024 : ಜಾನುವಾರ ಮೈ ತೊಳೆಯಲು ಹೋಗಿದ್ದ ಯುವಕ (Youth) ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸೊರಬ ತಾಲೂಕು ಭೈರೆಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಇಲ್ಲಿನ ಮಿಥುನ್ ಆರ್. ಪಾಟೀಲ್ (21) ಮೃತ ದುರ್ದೈವಿ. (ಈ ಸುದ್ದಿಯನ್ನು ಇನ್ನು 27 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಇಂದು ಬೆಳಗ್ಗೆ ಮಿಥುನ್ ಜಾನುವಾರುಗಳ ಮೈ ತೊಳೆಯಲು ಕೆರೆಗೆ ಹೋದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಕೊನೆ ಉಸಿರೆಳೆದಿದ್ದಾನೆ. ಮಿಥುನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿ.ಎ. ವ್ಯಾಸಂಗ ಮಾಡುತ್ತಿದ್ದರು. ಘಟನೆ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಸಿಸಿಟಿವಿ ದೃಶ್ಯ ವೈರಲ್, ಐದೇ ಸೆಕೆಂಡ್ನಲ್ಲಿ ಭೀಕರ ಅಪಘಾತ
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

