THIRTHAHALLI NEWS, 18 OCTOBER 2024 : ಬೆಜ್ಜವಳ್ಳಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಬೈಕ್‌ನಲ್ಲಿದ್ದ ವಿದ್ಯಾರ್ಥಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ದೃಶ್ಯ ಮೈ ಜುಮ್ ಅನಿಸಲಿದೆ.
ಅ.18ರ ಬೆಳಗ್ಗೆ 8.25ಕ್ಕೆ ಅಪಘಾತ ಸಂಭವಿಸಿದೆ. ತೀರ್ಥಹಳ್ಳಿ – ಶಿವಮೊಗ್ಗ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಐದೇ ಸೆಕೆಂಡ್‌ನಲ್ಲಿ ಎಲ್ಲವು ಮುಗೀತು
ತೀರ್ಥಹಳ್ಳಿ ತಾಲೂಕು ತನಿಕಲ್‌ನ ಕೌಟ್ ಮನೆ ನಿವಾಸಿ ಪ್ರಥಮ್ (16) ಬೆಳಗ್ಗೆ ಕಾಲೇಜಿಗೆ ತೆರಳಲು ಬೆಜ್ಜವಳ್ಳಿಗೆ ಬೈಕಿನಲ್ಲಿ ಆಗಮಿಸಿದ್ದರು. ತನ್ನ ಮನೆ ರಸ್ತೆಯಿಂದ ಬೈಕ್‌ನಲ್ಲಿ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿ ದಾಟುವಾಗಿ ಅಪಘಾತ ಸಂಭವಿಸಿದೆ. ತೀರ್ಥಹಳ್ಳಿ ಕಡೆಯಿಂದ ಬಂದ ಗೋವಾ ನೋಂದಣಿಯ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ » ಶಿವಮೊಗ್ಗಕ್ಕೆ ನಾಳೆ ಸಚಿವ ಮಧು ಬಂಗಾರಪ್ಪ, ಎಲ್ಲೆಲ್ಲಿ ಭೇಟಿ ಕೊಡ್ತಾರೆ?
ಡಿಕ್ಕಿಯ ರಭಸಕ್ಕೆ ಪ್ರಥಮ್ ಬಸ್ಸಿನ ಅಡಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ. ಬೈಕ್ ನಜ್ಜುಗುಜ್ಜಾಗಿತ್ತು. ಬಸ್ಸಿನ ಮುಂಭಾಗವು ಜಖಂ ಆಗಿತ್ತು. ಐದೇ ಸೆಕೆಂಡ್‌ನಲ್ಲಿ ಅಪಘಾತ ಸಂಭವಿಸಿತ್ತು.
ಪ್ರಥಮ್‌ನನ್ನು ಕೂಡಲೆ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗುಂಬೆ ಸಮೀಪ ಮಾರ್ಗ ಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ.
