ದಿನ ಭವಿಷ್ಯ | 11 ಜೂನ್‌ 2023 | ಇವತ್ತು ಯಾವ್ಯಾವ ರಾಶಿಯವರಿಗೆ ಹೇಗಿದೆ ಭವಿಷ್ಯ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 11 JUNE 2023 | DINA BHAVISHYA

DINA-BHAVISHYA

Meshaಮೇಷ

ತಂದೆಯ ಸಲಹೆ ಪಡೆದು ಮುಂದುವರೆದರೆ ಲಾಭ. ಅನುಭವಿಗಳ ಜೊತೆಗಿನ ಒಡನಾಟದಿಂದ ಅನುಕೂಲಕರ. ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು.


Vrushabaವೃಷಭ

ಉದ್ಯಮಿಗಳು ಹಣ ಹೂಡಿಕೆ ಮಾಡುವ ಮುನ್ನ ಹಲವು ಬಾರಿ ಯೋಚಿಸಬೇಕಿದೆ. ನಿಮ್ಮ ಖ್ಯಾತಿ ನಾಶವಾಗುವ ಸಾಧ್ಯತೆ ಇದೆ. ದುಂದುವೆಚ್ಚ ಆಗಲಿದೆ. ನಿಮ್ಮ ಉತ್ತಮ ಕಾರ್ಯಕ್ಕೆ ಕೆಲಸದ ಸ್ಥಳದಲ್ಲಿ ಸನ್ಮಾನ ಸಿಗಲಿದೆ.


Mithunaಮಿಥುನ

ಅಕ್ಕಪಕ್ಕದ ಮನೆಯವರ ಜೊತೆಗೆ ಜಗಳ ಸಾಧ್ಯತೆ. ಕೆಲಸದಲ್ಲಿ ಉತ್ತಮ ಸಮಯ ಮತ್ತು ಪ್ರಗತಿ ಸಾಧಿಸುತ್ತೀರಿ. ಹಣದ ಖರ್ಚಿನ ಮೇಲೆ ನಿಗಾ ಇರಲಿ. ಅಪವ್ಯಯ ಮಾಡುವುದನ್ನು ಮುಂದುವರೆಸದಿರಿ.


Karkatakaಕರ್ಕಾಟಕ

ಗ್ರಹ, ನಕ್ಷತ್ರಗಳ ಚಲನೆಯಿಂದಾಗಿ ನಿಮಗೆ ಹಣ ಸಂಪಾದಿಸಲು ಹಲವು ಅವಕಾಶ ಲಭಿಸಲಿದೆ. ಕೌಟುಂಬಿಕ ಸಮಸ್ಯೆ ಪರಿಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತೀರ.


Shivamogga Live Editor Nitin Kaidotlu

 


Simhaಸಿಂಹ

ಉಳಿತಾಯದ ಹಣದಿಂದಾಗಿ ಇಂದು ದೊಡ್ಡ ಸಮಸ್ಯೆಯಿಂದ ಪಾರಾಗುತ್ತೀರ. ಕೆಲಸದ ಸ್ಥಳದಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂದು ಗೊತ್ತಿಲ್ಲದೆ ಹಲವು ತಪ್ಪುಗಳಾಗುತ್ತವೆ. ಹಿರಿಯ ಅಧಿಕಾರಿಗಳ ಸಿಟ್ಟಿಗೆ ಗುರಿಯಾಗುತ್ತೀರಿ.


Kanyaಕನ್ಯಾ

ಅತ್ಯಂತ ಒತ್ತಡದ ದಿನ. ಹಣದ ಖರ್ಚಿಗೆ ಲಗಾಮು ಇಲ್ಲದಂತಾಗುತ್ತದೆ. ಸ್ನೇಹಿತರು, ಕುಟುಂಬದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ. ಕಷ್ಟದಲ್ಲಿರುವವರಿಗೆ ನೆರವಾಗುತ್ತೀರಿ. ಇದರಿಂದ ಗೌರವ ಲಭಿಸುತ್ತದೆ.


Thulaತುಲಾ

ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ನಿಮ್ಮ ಆತ್ಮವಿಶ್ವಾಸದಿಂದ ಲಾಭ. ಹೊಸ ಸ್ನೇಹಿತರನ್ನು ಸಂಪಾದಿಸುತ್ತೀರಿ. ಕೆಲವು ವ್ಯಾಪಾರಿಗಳು ತಮ್ಮ ಚಾಣಾಕ್ಷತೆಯಿಂದ ಲಾಭ ಪಡೆಯಲಿದ್ದಾರೆ.


Vrushikaವೃಶ್ಚಿಕ

ಹಠಾತ್‌ ಪ್ರವಾಸ ಕೈಗೊಳ್ಳಬೇಕಾಗುತ್ತದೆ. ವ್ಯಾಪಾರ, ವ್ಯವಹಾರದ ಉದ್ದೇಶಕ್ಕೆ ಹೆಚ್ಚು ಸುತ್ತಾಡಬೇಕಾಗುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ.


Dhanuಧನಸ್ಸು

ನಿಮ್ಮ ಆಲೋಚನೆಗಳ ಮೇಲೆ ಸ್ನೇಹಿತರು ಪ್ರಭಾವ ಬೀರಲಿದ್ದಾರೆ. ಹಣ ಕೈ ಸೇರಲಿದೆ. ಇದರಿಂದ ವೆಚ್ಚಗಳನ್ನು ಭರಿಸಲು ಅನುಕೂಲ. ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.


Makaraಮಕರ

ಕೆಲಸದಲ್ಲಿ ಪ್ರಮುಖ ಯೋಜನೆಗಳು ಕಾರ್ಯಗತವಾಲಿದೆ. ಇದರಿಂದ ಆರ್ಥಿಕ ಲಾಭ ಉಂಟಾಗಲಿದೆ. ಯಾರ ಕೆಲಸದಲ್ಲಿಯು ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ವ್ಯವಹಾರದ ಪಾಲುದಾರರೊಂದಿಗೆ ಉತ್ತಮ ಬಾಂಧವ್ಯವಿರಲಿ.


Kumbaಕುಂಭ

ಸಂಬಂಧಿಕರಿಗೆ ಸಾಲ ಕೊಡುವ ಗೋಜಿಗೆ ಹೋಗಬೇಡಿ. ಸಮಯ ವ್ಯರ್ಥ. ಕಠಿಣ ಸಮಯವನ್ನು ಎದುರಿಸಿದ್ದೀರ. ಈಗ ನೆಮ್ಮದಿ ಸಿಗಲಿದೆ.


Meenaಮೀನ

ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಖರ್ಚು ವೆಚ್ಚಗಳ ಮೇಳೆ ನಿಗಾ ಇರಲಿ. ನೆರೆಹೊರೆಯವರೊಂದಿಗೆ ಜಗಳ ಸಾಧ್ಯತೆ. ಸಂಗಾತಿ ಜೊತೆಗೆ ಹೆಚ್ಚು ಸಮಯ ಕಳೆಯಿರಿ.


DINAKONDU PARIHARA jpgಮೊರ, ಪೊರಕೆಗಳನ್ನು ಕಾಲುಗಳಿಂದ ಒದೆಯುವುದು ಮತ್ತು ತುಳಿಯುವುದು ಸರಿಯಲ್ಲ. ಒಂದು ವೇಳೆ ಮೊರ ಮತ್ತು ಪೊರಕೆಗೆ ಕಾಲು ತಗುಲಿದರೆ ನಮಸ್ಕಾರ ಮಾಡಿಕೊಳ್ಳಿ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : June 11, 2023

Leave a Comment