ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 16 DECEMBER 2024
ಮೇಷ
ರಾಜಕೀಯದಲ್ಲಿ ಹೆಚ್ಚಿನ ಪ್ರಭಾವ ಹೊಂದಲು ಹಿರಿಯ ರಾಜಕಾರಣಿಯ ಕೃಪೆ ಪಡೆಯಬೇಕು. ಪುತ್ರನಿಗೆ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರವು ಸಿಗುವುದು.
ವೃಷಭ
ವೃತ್ತಿಯ ಸೂಕ್ಷ್ಮ ವಿಷಯ ಅರಿತು ಉತ್ಸಾಹದಿಂದ ಕೆಲಸ ಮಾಡಲಿದ್ದೀರಿ. ವೃತ್ತಿ ಜೀವನದಲ್ಲಿ ಉತ್ತಮ ಸುಧಾರಣೆ. ಉದ್ಯೋಗದಲ್ಲಿನ ಅನಿಶ್ಚಿತತೆ ದೂರಾಗಲಿದೆ.
ಮಿಥುನ
ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವುದು ಅನುಕೂಲ ತರಲಿದೆ. ಸ್ವಂತ ವ್ಯವಹಾರ ಮಾಡುವವರಿಗೆ ಪ್ರಗತಿ.
ಕರ್ಕಾಟಕ
ತೆರೆ ಮರೆಯ ಸಂಚು ಅರಿವಿಗೆ ಬರಲಿದೆ. ಹೂಡಿಕೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಮೊದಲು ಯೋಚಿಸುವುದು ಉತ್ತಮ.
ಸಿಂಹ
ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವಿಚಾರದಲ್ಲಿ ಸ್ವಲ್ಪ ಹಿನ್ನಡೆ. ಕಣ್ಣಿನ ದೋಷ ಉಂಟಾಗಲಿದೆ. ಮಕ್ಕಳ ಬಗ್ಗೆ ಗಮನವಿರಲಿ.
ಕನ್ಯಾ
ದಾಯಾದಿ ಕಲಹಗಳು ನಿರ್ಮೂಲನೆಯಾಗಲಿದೆ. ಷೇರು ವ್ಯವಹಾರದಲ್ಲಿ ಹೆಚ್ಚಿನ ಹಣ ಹೂಡಿಕೆ. ಅತಿಯಾದ ಆಲಸ್ಯ ಸಮಸ್ಯೆ ತರಲಿದೆ.
ತುಲಾ
ಗುರುವಿನ ಮಾರ್ಗದರ್ಶನದಂತೆ ಸಾಗಿದರೆ ಅಭಿವೃದ್ಧಿ ಆಗಲಿದೆ. ಭೂ ವ್ಯವಹಾರಗಳ ಸಮಸ್ಯೆ ನಿವಾರಣೆ. ಆದಾಯ ಹೆಚ್ಚಳ.
ವೃಶ್ಚಿಕ
ಪಾಪ ಪ್ರಜ್ಞೆ ಕಾಡಲಿದೆ. ಧಾರ್ಮಿಕ ವಿಚಾರಗಳತ್ತ ಮನಸು ಸೆಳೆಯಲಿದೆ. ಪಿತ್ರಾರ್ಜಿತ ಆಸ್ತಿ ಕೈಸೇರಲಿದೆ.
ಧನು
ಪ್ರಭಾವಿಗಳಿಂದ ನೆರವು ದೊರೆಯಲಿದೆ. ವಿರೋಧಿಗಳು ರಾಜಿಯಾಗಲಿದ್ದಾರೆ. ಕುಟುಂಬದಲ್ಲಿ ನೆಮ್ಮದಿ.
ಮಕರ
ಮೇಲಧಿಕಾರಿಗಳಿಂದ ನಿರೀಕ್ಷಿತ ಸಹಕಾರ ದೊರೆಯಲಿದೆ. ಯಾವುದೆ ವಿಚಾರದ ಕುರಿತು ಸ್ಪಷ್ಟ ತೀರ್ಮಾನಕ್ಕೆ ಬರುವುದು ಕಷ್ಟಕರ ವಾತಾವರಣ.
ಕುಂಭ
ವಿದೇಶಿ ವ್ಯವಹಾರಗಳು ಕೈಗೂಡಲಿದೆ. ಕಲಾವಿದರಿಗೆ ಅವಕಾಶಗಳು ಲಭಿಸಲಿವೆ. ಉದ್ಯೋಗ ಸ್ಥಳದಲ್ಲಿ ಅಡ್ಡಿ ಆತಂಕಗಳು ಎದುರಾಗಲಿದೆ.
ಮೀನ
ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗದೆ ಪರಿತಪಿಸುವಂತಾಗಲಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಸೂಪರ್ ಮಾರ್ಕೆಟ್‌ಗಳ ಟ್ರೆಂಡ್ ಜೋರು, ನಿತ್ಯ ಸಾವಿರ ಸಾವಿರ ಗ್ರಾಹಕರು, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422