ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 18 DECEMBER 2024
ಮೇಷ
ಆಸ್ತಿ ಖರೀದಿಗೆ ದೃಢ ನಿರ್ಧಾರ. ಕುಟುಂಬದ ನೆರವು ಪಡೆದು ಹೆಜ್ಜೆ ಇರಿಸುವುದು ಸೂಕ್ತ.
ವೃಷಭ
ದೂರ ಪ್ರಯಾಣ ಸಾಧ್ಯತೆ. ಪ್ರವಾಸದ ಯೋಜನೆಗಳು ಫಲ ಕೊಡಲಿವೆ. ಬರಹಗಾರರಿಗೆ ಅನುಕೂಲಕರ ವಾತಾವರಣ.
ಮಿಥುನ
ಸಂಕಷ್ಟದಲ್ಲಿರುವ ಸ್ನೇಹಿತರಿಗೆ ನೆರವಿನ ಹಸ್ತ ಚಾಚುವುದು ಒಳಿತು. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ವಹಿಸಿ.
ಕರ್ಕಾಟಕ
ಸಂಬಂಧಿಯೊಬ್ಬರ ನಿಧನದ ಸುದ್ದಿ ತಲುಪುವ ಸಾಧ್ಯತೆ. ವಿದ್ಯಾರ್ಥಿಗಳು ಓದು, ಬರಹದ ಕಡೆಗೆ ಹೆಚ್ಚು ಗಮನ ವಹಿಸುವುದು ಸೂಕ್ತ.
ಸಿಂಹ
ಸಮಸ್ಯೆಗಳ ಬಗ್ಗೆ ಹೆಚ್ಚು ಆಲೋಚಿಸುವ ಬದಲು ಪರಿಹಾರದ ಕುರಿತು ಚಿಂತಿಸಿ. ಇತರರಿಗೆ ಸಮಸ್ಯೆ ಉಂಟು ಮಾಡುವ ಯೋಚನೆ ಸಲ್ಲ.
ಕನ್ಯಾ
ಕೆಲಸ ದೊರೆಯಲಿದೆ. ಭವಿಷ್ಯದ ಆದಾಯಕ್ಕೆ ಅಡ್ಡಿ, ಆತಂಕವಿಲ್ಲ. ಸ್ವಂತ ವ್ಯಾಪಾರ ಆರಂಭಿಸುವ ಯೋಚನೆಯಲ್ಲಿ ಇರುವವರಿಗೆ ಸ್ನೇಹಿತರ ನೆರವು ದೊರೆಯುವ ಸಂಭವ.
ತುಲಾ
ನೆರೆ – ಹೊರೆಯವರ ಜೊತೆ ದೊಡ್ಡ ಮಟ್ಟದ ಭಿನ್ನಾಭಿಪ್ರಾಯ. ಸಣ್ಣ ಪುಟ್ಟ ವಿಚಾರಕ್ಕೂ ಕೋಪಗೊಳ್ಳುವ ಸಂಭವ.
ವೃಶ್ಚಿಕ
ಕೆಲಸದ ಸಂದರ್ಭ ವೈಯಕ್ತಿಕ ಸಮಸ್ಯೆಗಳ ಕುರಿತು ಯೋಚಿಸದಿರಿ. ಉದ್ಯೋಗ ಸ್ಥಳದಲ್ಲಿ ಹೊಸ ಅವಕಾಶಗಳು ದೊರೆಯುವ ಸಂಭವ.
ಧನು
ಹೊಸ ಯೋಜನೆಗಳು, ಅವುಗಳ ಬೆಳವಣಿಗೆ ಕುರಿತು ಆಪ್ತರ ಜೊತೆ ಚರ್ಚಿಸಿ. ಖಾದಿ ಉದ್ಯಮದವರಿಗೆ ನೆರವು ದೊರೆಯಲಿದೆ.
ಮಕರ
ಅನಾವಶ್ಯಕ ಅನುಮಾನಗಳನ್ನು ದೂರಗೊಳಿಸಿ. ರಾಜಕೀಯದವರ ನೆರವಿನಿಂದ ಉದ್ಯೋಗ ಲಭ್ಯ.
ಕುಂಭ
ಹಿಂದಿನ ನಿರ್ಧಾರಗಳಿಂದ ವ್ಯವಹಾರದಲ್ಲಿ ಒಳಿತಾಗಲಿದೆ. ಹಣ ಸಂಪಾದನೆಗೆ ಇರುವ ಅಡೆತಡೆ ದೂರಾಗಲಿದೆ.
ಮೀನ
ಉದ್ಯೋಗದಲ್ಲಿ ಅನಿರೀಕ್ಷಿತ ಬೆಳವಣಿಗೆ. ಹವ್ಯಾಸಗಳಿಂದ ಮನಸಿಗೆ ತುಸು ನೆಮ್ಮದಿ. ಕುಟುಂಬದೊಂದಿಗೆ ತಾಳ್ಮೆಯಿಂದ ವರ್ತಿಸುವುದು ಸೂಕ್ತ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಸೂಪರ್ ಮಾರ್ಕೆಟ್‌ಗಳ ಟ್ರೆಂಡ್ ಜೋರು, ನಿತ್ಯ ಸಾವಿರ ಸಾವಿರ ಗ್ರಾಹಕರು, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422