DINA BHAVISHYA, 18 SEPTEMBER 2024
» ಮೇಷ : ಅರ್ಥಿಕವಾಗಿ ಉತ್ತಮ. ಆರೋಗ್ಯದ ಕಡೆ ಗಮನ ಅಗತ್ಯ. ವ್ಯಯದ ರಾಹು ಅಧಿಕ ಖರ್ಚು ಮಾಡಿಸುತ್ತಾನೆ. ಗಣೇಶನಿಗೆ ಪಂಚಾಮೃತ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ
» ವೃಷಭ : ನೆಮ್ಮದಿಯಿಂದ ಇದ್ದೀರ. ವಿದ್ಯಾಭ್ಯಾಸಕ್ಕೆ ತೊಡಕು. ಉದ್ಯೋಗದಲ್ಲಿ ಆಲಸ್ಯ. ಶಂ ಶನೈಶ್ಚರಾಯ ನಮಃ ನಾಮ ಮಂತ್ರ ಜಪ ಮಾಡಿ..
ಶುಭ ಸಂಖ್ಯೆ 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
» ಮಿಥುನ: ದೇಹಾರೋಗ್ಯದಲ್ಲಿ ಉತ್ತಮವಿದ್ದರೂ ಶುಕ್ರ-ಕೇತು ಬಾಧಿಸುತ್ತಿದ್ದಾರೆ. ಆರೋಗ್ಯದಲ್ಲಿ ಏರು-ಪೇರು. ತೊಂದರೆ ಇಲ್ಲ. ಕಾರ್ಯ ಸಿದ್ಧಿಸುತ್ತಿಲ್ಲ. ಮಂಗಳಕರ ಗಣಪತಿ ಪೂಜೆ ಮಾಡಿಸಿ.
ಶುಭ ಸಂಖ್ಯೆ : 5-6-10, ಬಣ್ಣ: ಹಳದಿ-ಕೆಂಪು-ಹಸಿರು
» ಕರ್ಕ : ಹೆಂಡತಿಯಿಂದ ಆರ್ಥಿಕ ಸಮಸ್ಯೆ ಪರಿಹಾರ. ಸಹೋದರರಿಂದ ತೊಂದರೆ. ಆಸ್ತಿ ಖರೀದಿಗೆ ಉತ್ತಮ. ಕಾರ್ಯ ಸ್ಥಾನದಲ್ಲಿ ಒತ್ತಡ. ಆಂಜನೇಯನಿಗೆ ನಮಸ್ಕರಿಸಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
» ಸಿಂಹ : ಮಧ್ಯಮ ಫಲ ನಿಮ್ಮದು. ಆರ್ಥಿಕ ನಷ್ಟ ಸ್ವಲ್ಪ ಪರಿಹಾರ. ಶಾರೀರಿಕ ಸೌಖ್ಯ ಕಡಿಮೆ. ವಿದ್ಯಾಭ್ಯಾಸಕ್ಕೆ ಪೂರಕ ದಿನ. ಶನಿ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
» ಕನ್ಯಾ : ಅತಿಯಾದ ಮೈಕೈ ನೋವು ಬಾಧಿಸುತ್ತದೆ. ಶನಿ ದೇವರಿಗೆ ಎಳ್ಳೆಣ್ಣೆ ಅಭಿಷೇಕ ಮಾಡಿಸಿ. ಭೂ ಸಂಬಂಧ ವ್ಯವಹರಿಸಬಹುದು.
ಶುಭ ಸಂಖ್ಯೆ : 7-10-11-03, ಬಣ್ಣ : ಕೆಂಪು-ನೀಲಿ-ಬೂದು
» ತುಲಾ : ಖರ್ಚು ನಿಮ್ಮನ್ನು ಯೋಚನೆಗೆ ಒಡ್ಡಿದೆ. ಪಂಚಮದ ಶನಿ ಅನುಕೂಲನಾದರೂ. ಪ್ರಯೋಜನ ಕಡಿಮೆ. ಉದ್ಯೋಗ ಪ್ರಗತಿ. ಗಣೇಶನನ್ನು ಪೂಜಿಸಿ.
ಶುಭ ಸಂಖ್ಯೆ : 8-9-4, ಬಣ್ಣ : ನೀಲಿ-ಬಿಳಿ-ಬೂದು
» ವೃಶ್ಚಿಕ : ವಿವಾಹ ಮಂಗಳಕರ ನಿಮ್ಮದು. ಲಾಭ ಕಡಿಮೆ. ರಾಹು ಕೋಪಿಸಿಕೊಂಡಿದ್ದಾನೆ. ಉದ್ದು ದಾನ ಮಾಡಿ. ಬುದ್ಧಿ ಪ್ರಚೋದಿಸುತ್ತದೆ.
ಶುಭ ಸಂಖ್ಯೆ : 8-1-5, ಬಣ್ಣ : ಕೆಂಪು-ಬಿಳಿ-ಕೇಸರಿ
» ಧನು : ನಿಮ್ಮ ಬುದ್ಧಿ ನಿಮ್ಮನ್ನು ಮತ್ತೆ ಹಾಳು ಮಾಡುತ್ತಿದೆ. ಸರಿಯಾದ ದಾರಿ ಹುಡುಕಿ. ಭಾಗ್ಯೋದಯವಿದೆ. ಉದ್ಯೋಗವಿಲ್ಲ. ಖರ್ಚು ಕಡಿಮೆ. ಓಂ ಶ್ರೀಧರಾಯನಮಃ ನಾಮ ಜಪ ಮಾಡಿ.
ಶುಭಸಂಖ್ಯೆ : 9-12-04, ಬಣ್ಣ : ಕೇಸರಿ-ಬಿಳಿ
» ಮಕರ : ಸಹೋದರರ ಕಲಹ. ರಾಜಿ ಮಾಡಿಕೊಳ್ಳಿ. ಹೆಣ್ಣು ಮಕ್ಕಳ ಮನೋಸ್ಥೈರ್ಯ ಹೆಚ್ಚಿದೆ. ಅದೃಷ್ಟ ಪರೀಕ್ಷೆಯಲ್ಲಿದೆ. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ: 10-11-02, ಬಣ್ಣ: ನೀಲಿ-ಬೂದು-ಕಪ್ಪು
» ಕುಂಭ : ಆಲಸ್ಯ ಬಾಧಿಸಲಿದೆ. ದಶರಥನು ಬರೆದ ಶನಿಸ್ತೋತ್ರ ಓದಿ ಸಹಕಾರಿ ಆಗಲಿದೆ. ಹಣದ ಬಗ್ಗೆ ಎಚ್ಚರ. ಮನೆಯವರ ಪ್ರೀತಿ ಸಹಕಾರ ಚೆನ್ನಾಗಿದೆ.
ಶುಭ ಸಂಖ್ಯೆ : 11-03-06, ಬಣ್ಣ : ನೀಲಿ-ಬೂದು
» ಮೀನ : ಕಡುಕೋಪ ನಿಮ್ಮನ್ನು ಎಲ್ಲರಿಂದ ದೂರೀಕರಿಸಲಿದೆ. ಆರೋಗ್ಯ ಪ್ರಗತಿ. ಮನೆಯವರ ಮನಸ್ಸು ಕೆಡಲಿದೆ. ಅಧಿಕ ಹಣ ವ್ಯಯ. ನಾಗನನ್ನು ನೆನೆಯಿರಿ.
ಶುಭ ಸಂಖ್ಯೆ : 12-1-8-5, ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » GOOGLE PAY LOAN, ಬ್ಯಾಂಕ್ಗೆ ಹೋಗೋದೆ ಬೇಡ, ಸಿಗುತ್ತೆ ಲಕ್ಷ ರೂ. ಸಾಲ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200