ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 21 DECEMBER 2024
ಮೇಷ
ಸಕಾರಾತ್ಮಕ ಯೋಚನೆ ಮಾಡಿ. ನಿಮ್ಮ ಸಮಯ ಮತ್ತು ಹಣವನ್ನು ಅಪವ್ಯಯ ಮಾಡುವವರಿಂದ ದೂರವಿರಿ. ಮಕ್ಕಳ ಆರೋಗ್ಯದ ಕಡೆಗೆ ಗಮನವಿರಲಿ. ಹೊಸ ವಿಚಾರ ಕಲಿಕೆಗೆ ಸೂಕ್ತ ಸಮಯ.
ವೃಷಭ
ಕೆಲಸದಲ್ಲಿ ಪ್ರಮುಖ ಯೋಜನೆಗಳು ಕಾರ್ಯಗತವಾಲಿದೆ. ಇದರಿಂದ ಆರ್ಥಿಕ ಲಾಭ ಉಂಟಾಗಲಿದೆ. ಯಾರ ಕೆಲಸದಲ್ಲಿಯು ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ವ್ಯವಹಾರದ ಪಾಲುದಾರರೊಂದಿಗೆ ಉತ್ತಮ ಬಾಂಧವ್ಯವಿರಲಿ.
ಮಿಥುನ
ಕೆಲವರು ನಿಮ್ಮನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ಮೇಲೆ ನಿಮಗೆ ಕೋಪ ಬರಲಿದೆ. ಸಹಭಾಗಿತ್ವ ವ್ಯವಹಾರ ಮತ್ತು ಯೋಜನೆಗಳಲ್ಲಿ ಲಾಭವಿಲ್ಲ.
ಕರ್ಕಾಟಕ
ಆರೋಗ್ಯದ ಮೇಲೆ ನಿಗಾ ವಹಿಸಿ. ಆಸ್ಪತ್ರೆಯಲ್ಲಿ ಅತಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಮನೆಯಲ್ಲಿ ವತಿರಿಕ್ತ ಪರಿಸ್ಥಿತಿ ಇರಲಿದೆ. ಜೊತೆಗಿರುವವರ ಮೇಲೆ ಅನುಮಾನ ಪಡಬೇಡಿ.
ಸಿಂಹ
ನಿಮ್ಮ ಆಲೋಚನೆಗಳ ಮೇಲೆ ಸ್ನೇಹಿತರು ಪ್ರಭಾವ ಬೀರಲಿದ್ದಾರೆ. ಹಣ ಕೈ ಸೇರಲಿದೆ. ಇದರಿಂದ ವೆಚ್ಚಗಳನ್ನು ಭರಿಸಲು ಅನುಕೂಲ. ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಕನ್ಯಾ
ಉದ್ಯಮಿಗಳು ಹಣ ಹೂಡಿಕೆ ಮಾಡುವ ಮುನ್ನ ಹಲವು ಬಾರಿ ಯೋಚಿಸಬೇಕಿದೆ. ನಿಮ್ಮ ಖ್ಯಾತಿ ನಾಶವಾಗುವ ಸಾಧ್ಯತೆ ಇದೆ. ದುಂದುವೆಚ್ಚ ಆಗಲಿದೆ. ನಿಮ್ಮ ಉತ್ತಮ ಕಾರ್ಯಕ್ಕೆ ಕೆಲಸದ ಸ್ಥಳದಲ್ಲಿ ಸನ್ಮಾನ ಸಿಗಲಿದೆ.
ತುಲಾ
ತಂದೆಯ ಸಲಹೆ ವ್ಯವಹಾರದ ಸ್ಥಳದಲ್ಲಿ ಲಾಭ ತಂದುಕೊಡಲಿದೆ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಾಗಲಿವೆ. ಮಾನಸಿಕ ಒತ್ತಡ. ಪ್ರಮುಖ ಸಮಸ್ಯೆಗಳ ಮೇಲೆ ಹೆಚ್ಚು ನಿಗಾ ಇರಲಿ.
ವೃಶ್ಚಿಕ
ಹಣ ಹೂಡಿಕೆಗೆ ಆತುರ ಬೇಡ. ಒಪ್ಪಂದಗಳಿಂದ ನಿರೀಕ್ಷಿತ ಲಾಭ ಸಿಗುವುದಿಲ್ಲ. ದಿಟ್ಟ ಕ್ರಮಗಳಿಂದ ಅನುಕೂಲ ಆಗಲಿದೆ. ಸಮಯ ವ್ಯರ್ಥ ಮಾಡಬೇಡಿ.
ಧನಸ್ಸು
ಮಾನಸಿಕವಾಗಿ ದೃಢವಾಗಿರಿ. ಹಳೆಯ ವಿಚಾರಕ್ಕೆ ಜಗಳವಾಗುವ ಸಾಧ್ಯತೆ ಉಂಟು. ಕುಟುಂಬದವರು ಪ್ರಮುಖ ಸಂಗತಿಗಳನ್ನ ನಿಮ್ಮೊಂದಿಗೆ ಚರ್ಚೆ ಮಾಡಲಿದ್ದಾರೆ. ಒಳ್ಳೆಯ ಆಹಾರ ಸೇವಿಸುವಿರಿ.
ಮಕರ
ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ನಿಮ್ಮ ಆತ್ಮವಿಶ್ವಾಸದಿಂದ ಲಾಭ. ಹೊಸ ಸ್ನೇಹಿತರನ್ನು ಸಂಪಾದಿಸುತ್ತೀರಿ. ಕೆಲವು ವ್ಯಾಪಾರಿಗಳು ತಮ್ಮ ಚಾಣಾಕ್ಷತೆಯಿಂದ ಲಾಭ ಪಡೆಯಲಿದ್ದಾರೆ.
ಕುಂಭ
ಪ್ರಯಾಣದ ವೇಳೆ ನಿಮ್ಮ ಅಮೂಲ್ಯ ವಸ್ತಗಳು ಕಳ್ಳತನವಾಗಲಿದೆ. ಮಕ್ಕಳಿಂದ ನೆಮ್ಮದಿ ಸಿಗಲಿದೆ. ಮಾನಸಿಕ ಒತ್ತಡ ನಿವಾರಣೆಗೆ ಎಲ್ಲರೊಂದಿಗೆ ಖುಷಿಯಿಂದ ಬೆರೆಯಿರಿ.
ಮೀನ
ಸಹೋದರ ಅಥವಾ ಸಹೋದರಿಗೆ ಆರ್ಥಿಕ ನೆರವು ನೀಡಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತೀರ. ಬಾಕಿ ಇರುವ ಮನೆ ಕೆಲಸಗಳು ನಿಮ್ಮನ್ನು ಹೈರಾಣಾಗಿಸುತ್ತವೆ. ಮನೆ ಮತ್ತು ಕುಟುಂಬದ ಕುರಿತು ಹೆಚ್ಚು ಮುತುವರ್ಜಿ ವಹಿಸುತ್ತೀರ.
ಇದನ್ನೂ ಓದಿ » ಎಟಿಎಂನಿಂದ ಹಣ ಬಿಡಿಸಿದ ಮರುದಿನ ಮೊಬೈಲ್ಗೆ ಬಂದಿದ್ದ ಮೆಸೇಜ್ ನೋಡಿ ಮಹಿಳೆಗೆ ಶಾಕ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422