» ಮೇಷ : ಈ ದಿನ ಆರೋಗ್ಯ ಸಮಸ್ಯೆ ಕಾಡುವ ಸಂಭವವಿದೆ. ಹಣವಿದ್ದರೂ ಶಾಂತಿಗೆ ಭಂಗವಿದೆ. ನೆನ್ನೆಯಂತೆ ಇಂದೂ ಖರ್ಚು. (Bhavishya)
ಪರಿಹಾರ : ಮನೆಯಲ್ಲಿಯೇ ಕುಲದೇವರಿಗೆ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿ
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
» ವೃಷಭ : ಹಣ ಬಲ ಜನ ಬಲವಿದೆ ಇಂದು. ಪಂಚಮದ ದೋಷ. ಲಾಭ ದೋಷದಿಂದ ಬಳಲಬಹುದು. ಹೆದರುವುದು ಬೇಡ.
ಪರಿಹಾರ : ಶಿವ-ವಿಷ್ಣುವಿನ ನಾಮಾವಳಿ ಓದಿ. ಕೆಲಸದಲ್ಲಿ ಮುನ್ನುಗ್ಗುತ್ತೀರ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
» ಮಿಥುನ : ಕುಟುಂಬದಲ್ಲಿ ಕಲಹ. ಸಿಟ್ಟು ಬಿಡದೆ ಕಾಡುತ್ತಿದೆ. ಖುಷಿ ವಿಚಾರ ಹತ್ತಿರ ಬರುತ್ತದೆ. ಪ್ರಯಾಣದ ಯೋಗ ಬರುತ್ತದೆ.
ಪರಿಹಾರ : ಬೂದು ಬಣ್ಣದ ಬಟ್ಟೆಯಲ್ಲಿ ಹುರಳಿ – ಉದ್ದು ಇಟ್ಟು ದಾನ ಮಾಡಿ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
» ಕರ್ಕ : ಪತ್ನಿಯ ಸಹಾಯದಿಂದ ಉತ್ತಮ ಕಾರ್ಯ. ಆರ್ಥಿಕ ಸ್ಥಿತಿ ಉತ್ತಮ. ಜೀವನದಲ್ಲಿ ಇಂದು ನೆಮ್ಮದಿ. ಹಣದ ಆಗಮನ.
ಪರಿಹಾರ : ಇಂದು ಸೂರ್ಯ ದೇವರಿಗೆ ನಮಸ್ಕಾರ ಮಾಡಿ. ಆರೋಗ್ಯ ಚೆನ್ನಾಗಿ ಆಗುತ್ತದೆ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
» ಸಿಂಹ : ಖುಷಿಯ ಮನಸ್ಥಿತಿ ನಿಮ್ಮದು. ನಿಮ್ಮ ಕಷ್ಟ ಸುಖಕ್ಕೆ ಸಹೋದರರು ಭಾಗಿಯಾಗುತ್ತಾರೆ. ಇಂದಿನ ದಿನ ಶುಭದಿನ. ಹಣದ ಚಿಂತೆ ಬಿಟ್ಟರೆ ನೆಮ್ಮದಿ ಇದೆ.
ಪರಿಹಾರ : ಕಡ್ಲೇಬೇಳೆಯನ್ನು ಗಣೇಶ ದೇವರಿಗೆ ಸಮರ್ಪಿಸಿ. ಭಕ್ತಿಯಿಂದ ಪೂಜಿಗೆ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
» ಕನ್ಯಾ : ಆಹಾರದಿಂದ ಅನಾರೋಗ್ಯ. ಹುಷಾರು. ಶರೀರ ಬಾಧೆ. ನಿಧಾನಗತಿಯ ಪರಿಹಾರ. ಸ್ನೇಹಿತರನ್ನು ಬೇಟಿ ಮಾಡಿ ನೆಮ್ಮದಿ ಇದೆ.
ಪರಿಹಾರ : ಎಳ್ಳೆಣ್ಣೆಯಲ್ಲಿ ಮುಖ ನೋಡಿ ಇಷ್ಟ ದೇವರಿಗೆ ಸಮರ್ಪಿಸಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
» ತುಲಾ : ಕುಟುಂಬದ ಸದಸ್ಯರಿಂದ ಸಮಸ್ಯೆ. ತಾಳ್ಮೆ ಇರಲಿ. ನಿಮ್ಮ ಇಷ್ಟ ಇಡೇರಬಹುದು. ಆರೋಗ್ಯದ ಬಗ್ಗೆ ಗಮನವಿರಲಿ.
ಪರಿಹಾರ : ಇಂದು ನಿಮ್ಮ ಇಷ್ಟದ ಬಟ್ಟೆ ಧರಿಸಿ ವ್ಯವಹರಿಸಿ. ಶುಭವಿದೆ.
ಶುಭ ಸಂಖ್ಯೆ : 8-9-4 ಬಣ್ಣ : ನೀಲಿ-ಬಿಳಿ-ಬೂದು
» ವೃಶ್ಚಿಕ : ಕೆಲವು ತೊಂದರೆಗಳು ಸಮಸ್ಯೆಯನ್ನು ನೀಡುತ್ತದೆ. ಮನೆಯ ವಾತಾವರಣ ಚೆನ್ನಾಗಿದೆ. ಉದ್ಯೋಗವೂ ಸಮಸ್ಯೇ ಇಲ್ಲ. ಖುಷಿ ಇದೆ.
ಪರಿಹಾರ : ಈಶ್ವರನ ಆರಾಧನೆ ಬಹಳ ಮುಖ್ಯ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
» ಧನು : ಆರೋಗ್ಯದ ಬಗ್ಗೆ ಎಚ್ಚರವಿರಲಿ. ಸಾಲ ಮಾಡಬೇಡಿ. ಹತ್ತಿರದವರ ಕಿರಿಕಿರಿ. ನಿಮ್ಮ ಹಠ ತೊಂದರೆಗೆ ಜಾಗ ಕೊಡುತ್ತದೆ.
ಪರಿಹಾರ : ಸದ್ಗುರುಗಳಿಗೆ ವಸ್ತ್ರ ಸಮರ್ಪಿಸಿ. ಕಷ್ಟ ಪರಿಹಾರವಾಗುತ್ತದೆ.
ಶುಭ ಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
» ಮಕರ : ಯಶಸ್ಸು ಹತ್ತಿರವಿದೆ. ಆದರೆ ಮುಟ್ಟುವುದು ಕಷ್ಟ. ಸಹೋದರರಿಗೆ ಸಹಾಯ ಧನ ನೀಡಬೇಕಾಗಬಹುದು. ಖರೀದಿಗೆ ಶುಭದಿನ.
ಪರಿಹಾರ : ಬಡವರಿಗೆ ಆಹಾರ ದಾನ ಮಾಡಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
» ಕುಂಭ : ದ್ವೇಷದ ಭಾವನೆ ಬೇಡ. ನಾಳೆ ಒಂಟಿಯಾಗಬಹುದು. ಕುಟುಂಬವೂ ಅಸಮದಾನ ನೀಡುತ್ತದೆ. ಇಂದು ಅನುಕೂಲಕರವಾಗಿಲ್ಲ. ತಾಳ್ಮೆ ಇರಲಿ.
ಪರಿಹಾರ : ವಿಷ್ಣು ಸಹಸ್ರನಾಮ ಓದಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
» ಮೀನ : ಎಲ್ಲದಕ್ಕೂ ತಲೆ ಕೊಡಬೇಡಿ. ಅದು ಎಲ್ಲರ ವಿಚಾರದಲ್ಲೂ. ಈದಿನ ತೊಂದರೆ ಇಲ್ಲ. ನೀವೇ ತೊಂದರೆ ತಂದುಕೊಳ್ಳುತ್ತೀರ.
ಪರಿಹಾರ : ದೇವಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಕುಂಸಿ, ಅರಸಾಳು ನಿಲ್ದಾಣಗಳಲ್ಲಿ ಎರಡು ಎಕ್ಸ್‌ಪ್ರೆಸ್ ರೈಲುಗಳ ಸ್ಟಾಪ್ ಮುಂದುವರಿಕೆ, ಯಾವ್ಯಾವ ರೈಲುಗಳು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200