ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 28 AUGUST 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮೇಷ : ಕುಜ ಮಿತ್ರ ಗೃಹ ಮತ್ತು ತೃತೀಯ ಸ್ಥಾನದಲ್ಲಿ ಇರುವುದು ತೊಂದರೆ ಇಲ್ಲ. ಆರೋಗ್ಯದ ಬಗ್ಗೆ ನಿಗಾ ಇರಲಿ. ಉದ್ಯೋಗದಲ್ಲಿನ ಆಲಸ್ಯ ಮುಂದುವರೆಯಲಿದೆ. ಗಣೇಶನಿಗೆ ಕಡಳೆಕಾಳು ದಾನ ಮಾಡಿ. ಶುಭ ಸಂಖ್ಯೆ: 1-5-8-9
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ವೃಷಭ : ನಾಲ್ಕರ ರವಿಗಿಂತ ಪಂಚಮದ ಕೇತು ಬಹಳ ಅಪಾಯಕಾರಿ. ಸಂಬಂಧ ಹಾಗೂ ಶಾರೀರಿಕ ಸೌಖ್ಯ ಹಾಳು ಮಾಡಿಯಾನು. ಗಣಪತಿಗೆ ಅಭಿಷೇಕ ಸೇವೆ ಮಾಡಿಸಿ. ಶುಭ ಸಂಖ್ಯೆ : 2-7-10-11
ಮಿಥುನ : ಬುಧ ನೇರ ಚಲನೆಯಲ್ಲಿ ಹಿತವಿದೆ. ಆದರೆ ಮನಸ್ಸಿನ ವ್ಯಥೆ ಇಂದು ಮುಂದುವರೆಯಲಿದೆ. ಧನಾಗಮನ ಕಡಿಮೆ. ಸೀಮಿತಕ್ಕೆ ಅಷ್ಟೆ ನಿಮ್ಮ ಲಕ್ಕು. ಆದರೂ ಬುದ್ದಿಯಿಂದ ಮುನ್ನಡೆಯಿರಿ.ವಿಷ್ಣು ಸಹಸ್ರನಾಮ ಓದಿ. ಶುಭ ಸಂಖ್ಯೆ : 5-6-10
ಕರ್ಕ : ನಿಮ್ಮ ಮಾತು ಬಹಳ ಖಾರವಾಗಿದೆ. ಹಿಡಿತವಿಲ್ಲ. ಮನಸ್ಸಿನಂತೆ ನಡೆಯಬೇಡಿ. ಅಷ್ಟಮದ ಶನಿ. ಸರ್ಪದೋಷ ಕಾಡಲಿದೆ. ಜೋಪಾನ. ಹುಡುಗರಿಗೆ ಅಗತ್ಯ ವಸ್ತು ದಾನ ಮಾಡಿ. ಶುಭ ಸಂಖ್ಯೆ : 4-5-1
ಸಿಂಹ : ಸಂತೋಷ ನೆಮ್ಮದಿ ನಿಮ್ಮ ಜೊತೆಯಲ್ಲೇ ಇದೆ. ಹಣ ಅಧಿಕ ವ್ಯಯ. ಮದುವೆಯ ವಿಚಾರ ಇಂದು ಇಲ್ಲ. ಶುಭ ಸಂಖ್ಯೆ : 5-6-9-11
ಕನ್ಯಾ : ಕೆಟ್ಟ ಕನಸು ನಿಮ್ಮನ್ನು ಹೆದರಿಸಲಿದೆ. ನೆನ್ನೆಯದ್ದೆ ಮುಂದುವರೆಯಲಿದೆ. ಹಣ ಖರ್ಚಿಲ್ಲದಿದ್ದರೂ. ಮನಸ್ಸಿಗೆ ನೆಮ್ಮದಿ ಕಡಿಮೆ. 21 ಬಾರಿ ಗಣೇಶನಿಗೆ ನಮಸ್ಕರಿಸಿ. ಶುಭ ಸಂಖ್ಯೆ : 7-10-11-03
ತುಲಾ : ಪೂರ್ತಿ ನೆಮ್ಮದಿ. ಪಂಚಮದ ಶನಿ ಅನುಕೂಲನೂ ಹೌದು. ಅನಾನುಕೂಲವೂ ಹೌದು. ನಾಗನ ಆರಾಧನೆ ಮಾಡಿ. ಶುಭ ಸಂಖ್ಯೆ : 8-9-4
ವೃಶ್ಚಿಕ : ಸರ್ಪದೋಷ ಕಾಡಲಿದೆ. ನಾಗನಿಗೆ ತನು ಸೇವೆಯಿಂದ ನಿಮ್ಮ ತನುವಿನ ಸೌಖ್ಯ ಉತ್ತಮ. ಗ್ರಹಗಳು ನಿಮ್ಮ ಕಾರ್ಯ ಮುಗಿಸುತ್ತದೆ. ಶುಭ ಸಂಖ್ಯೆ : 8-1-5
ಧನು : ಆರೋಗ್ಯ ಸೌಖ್ಯದಿಂದ ಕೂಡಿದೆ. ಈದಿನ ನೆಮ್ಮದಿ ಎದ್ದು ಕಾಣಲಿದೆ. ಕುಟುಂಬದ ಚಿಂತೆ ಬಿಡಿ. ಮಾತು ಕಡಿಮೆ ಇರಲಿ. ಶುಭ ಸಂಖ್ಯೆ : 9-12-04
ಮಕರ : ಮನೆಯಲ್ಲಿ ಮನಸ್ತಾಪ. ಇದು ಮುಗಿಯದ ಕಥೆ. ಅಷ್ಟೇನು ಭಾಗ್ಯೋದಯವಿಲ್ಲ. ಆರ್ಥಿಕ ಸಮಸ್ಯೆ ಕಾಡದು. ಶುಭ ಸಂಖ್ಯೆ: 10-11-02
ಕುಂಭ : ಒಂದು ರೀತಿ ನೀವು ಸುಖಿ. ಯೋಚನೆ ಮಾಡಬಾರದು ಅಷ್ಟೇ. ವಿಷ್ಣುವಿನ ಪೂಜೆ ಆರೋಗ್ಯ ಹೆಚ್ಚಿಸುತ್ತದೆ. ಮನೆ, ಪತಿ-ಪತ್ನಿ ಸೌಖ್ಯ ಉತ್ತಮ. ಶುಭ ಸಂಖ್ಯೆ : 11-03-06
ಮೀನ : ಹಿನ್ನಡೆ ಮುಂದುವರೆಯಲಿದೆ. ಸಿಟ್ಟು ನಿಮ್ಮನ್ನು ಬಾಧಿಸಲಿದೆ. ಮಕ್ಕಳ ಮನೊನಂದನ ಎದ್ದು ಕಾಣಲಿದೆ. ಕುಟುಂಬದಲ್ಲಿ ಉತ್ತಮ ಫಲ ಈದಿನ. ಕೃಷ್ಣ – ಶಿವನ ಆರಾಧನೆ ಫಲ ನೀಡುತ್ತದೆ. ಶುಭ ಸಂಖ್ಯೆ : 12-1-8-5
ಇದನ್ನೂ ಓದಿ ⇒ ಲಿಂಗನಮಕ್ಕಿ ಡ್ಯಾಮ್‌ನಿಂದ ಮತ್ತೆ ನೀರು ಹೊರಕ್ಕೆ, ಮೈದುಂಬಿದ ಜೋಗ ಜಲಪಾತ