ಮೇಷ : ಈದಿನ ನೆಮ್ಮದಿ ನಿಮ್ಮದು. ಹಣಕಾಸಿನ ಸ್ಥಿತಿ ಚುರುಕು. ಆರೋಗ್ಯ ಸ್ಥಿರ. ಆದರೆ ಅಧಿಕ ಖರ್ಚು. ನಾಗನ ಪೂಜೆ ಮಾಡಿಸಿ. (BHAVISHYA)
ವೃಷಭ : ನಿಮ್ಮ ದಿನ ಅನುಕೂಲಕರವು – ಅನಾನುಕೂಲವೂ ಆಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ಆರೋಗ್ಯ ಚೇತರಿಕೆ. ಉದ್ಯೋಗದಲ್ಲಿ ಉತ್ತಮ. ದೇವಿಗೆ 16 ನಮಸ್ಕಾರ ಮಾಡಿ.
![]() |
ಮಿಥುನ : ಸಿಟ್ಟಿನ ಮಾತು ತೊಂದರೆ ನೀಡಬಹುದು. ಹಿರಿಯರನ್ನ ಗೌರವಿಸಿ. ಉನ್ನತ ವಿದ್ಯಾಭ್ಯಾಸದ ಯೋಗ. ನಿರಂತರ ಭಾಗ್ಯ ನಡೆಯುತ್ತದೆ. ನಾಗನಿಗೆ ಪಂಚಾಮೃತ ಪೂಜೆ ಮಾಡಿಸಿ.
ಕರ್ಕ : ಚಂದ್ರ ಲಾಭದಲ್ಲಿ ಇರುವುದು ಹಿತ. ಕುಟುಂಬದಲ್ಲಿ ಸೌಖ್ಯ. ಅಷ್ಟಮದ ಶನಿ ಹೆಚ್ಚು ಬಾಧಿಸಲಾರ. ಮನಸ್ಸಿಗೆ ನೆಮ್ಮದಿಯ ದಿನ. ಕಾರ್ಯ ಸ್ಥಾನದಲ್ಲಿ ಒತ್ತಡ ಮುಂದುವರಿಕೆ. ಶನೈಶ್ಚರನಿಗೆ ನಮಸ್ಕರಿಸಿ.
ಸಿಂಹ : ಆರ್ಥಿಕ ಚೇತರಿಕೆ ಇದ್ದರೂ ಖುಷಿ ಇಲ್ಲ. ಮಡದಿಯ ಚಿಂತೆ ಬೇಡ. ಉದ್ಯೋಗ ಚೆನ್ನಾಗಿದೆ. ಈದಿನ ಉತ್ತಮ. ದೇವರ ಸ್ತೋತ್ರ ಪಠಿಸಿ.

ಕನ್ಯಾ : ಖುಷಿಯ ದಿನ. ಆರ್ಥಿಕ ಸಬಲೀಕರಣ. ಮನಸ್ಸಿನ ನೆಮ್ಮದಿ. ಆರೋಗ್ಯ ಪ್ರಗತಿ. ಅಧಿಕ ವ್ಯಯ ಇಲ್ಲ. ಉತ್ತಮದ ದಿನ ನಿಮ್ಮದು. ದುರ್ಗಾದೇವಿ ಪೂಜೆ ಮಾಡಿ.
ತುಲಾ : ನೀವು ಅಂದುಕೊಂಡದ್ದು ಆಗುತ್ತಿದೆ. ಪಂಚಮದ ಶನಿ ಲಾಭದಾಯಕ. ಭಾಗ್ಯೋದಯ. ಮನಸ್ಸಿನಂತೆ ಮನೆ. ಸ್ವಲ್ಪ ಖರ್ಚು. ನಾಗನನ್ನು ಪೂಜಿಸಿ.
ವೃಶ್ಚಿಕ : ಪಂಚಮದ ರಾಹು ಬಾಧಿಸುತ್ತಿದ್ದಾನೆ. ವಿವಾಹದಲ್ಲಿ ಬೇಸರ. ವ್ಯಯ ಕಡಿಮೆ. ಮನೆಯ ವಾತಾವರಣ ಖುಷಿ. ಲಾಭ ಕಾಣಸಿಗುತ್ತಿಲ್ಲ.
ಧನು : ಯೋಚನೆ ಬಿಡಿ. ಕೆಲಸ ಮಾಡಿ. ಕುಟುಂಬದಲ್ಲಿ ಪ್ರಗತಿ. ಆರೋಗ್ಯ ಚೇತರಿಕೆ. ಲಾಭ ಹೆಚ್ಚು. ಈಶ್ವರನ ಜಪ ಮಾಡಿ.
ಮಕರ : ಮನೋನಂದನ ಇಂದು. ಸಹೋದರರ ಬಾಂಧವ್ಯ ಕಡಿಮೆ. ಆರೋಗ್ಯದಲ್ಲಿ ಸಮ. ಹೆಚ್ಚು ಖುಷಿ ಇಲ್ಲ. ನಾಗನ ಆರಾಧನೆ ಮಾಡಿ.
ಕುಂಭ : ಅಸೂಯೆ ಹೆಚ್ಚಿದೆ. ಸಾಡೇಸಾತಿ ಕಾಡಿದೆ. ಕುಟುಂಬದಲ್ಲಿ ಆರ್ಥಿಕ ಪ್ರಗತಿ. ನೆಮ್ಮದಿಯಿಂದ ಜೀವನ. ಈದಿನ ಮಿಶ್ರ ಫಲ.
ಮೀನ : ನಿಮ್ಮ ಚಾಂಚಲ್ಯ ನಿಮಗೆ ತೊಂದರೆ. ಕುಟುಂಬದಲ್ಲಿ ಮಿಶ್ರ ಫಲ. ಆರೋಗ್ಯದ ಕಡೆ ಗಮನ ಅಗತ್ಯ. ಅಧಿಕ ವ್ಯಯದ ಗಮನ ಕೊಡಿ. ನಾಗನನ್ನು ನೆನೆಯಿರಿ.
ಇದನ್ನೂ ಓದಿ » ಶಿವಮೊಗ್ಗ ಈದ್ಗಾ ಮೈದಾನಕ್ಕೆ ಬೇಲಿ ವಿವಾದ, ಬೀದಿಗಿಳಿದ ಮುಸ್ಲಿಂ ಸಮುದಾಯ, ಇಡೀ ದಿನ ಏನೇನಾಯ್ತು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200