DINA BHAVISHYA, 31 AUGUST 2024
ಮೇಷ : ನಿಮ್ಮ ರಾಶಿಯ ಅಧಿಪತಿ ಇಂದು ಪಥವನ್ನು ಬದಲಿಸುತ್ತಿದ್ದಾನೆ. ಸ್ವಲ್ಪ ಒಳ್ಳೆಯದಿದೆ. ಶನಿವಾರ ಶ್ರಾವಣ ಮಾಸ ಈಶ್ವರ ನೆನೆಯಿರಿ. ಲಾಭ ಹೆಚ್ಚು. ಆರೋಗ್ಯ ನೋಡಿಕೊಳ್ಳಿ.
ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ರವಿ ಮಿಶ್ರ ಫಲ. ಚಂದ್ರ ಬುಧ ಸಂಯೋಗ ಸಹೋದರರ ಕಲಹ. ಮನಸ್ಸಿಗೆ ನೋವು ಬಾಧಿಸಲಿದೆ. ವೆಂಕಟೇಶನಿಗೆ ಅಭಿಷೇಕ ಸೇವೆ ಮಾಡಿಸಿ.
ಶುಭ ಸಂಖ್ಯೆ : 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಕುಜ ಬಲನಾಗಿದ್ದರೂ ರಾಶಿ ಅಧಿಪತಿ ಶತೃನೊಂದಿಗಿದ್ದಾನೆ. ಮನಸ್ಸು ಹಿಡಿತದಲ್ಲಿರಬೇಕು. ಮಾತಿನ ಮೇಲೆ ನಿಗಾ ಇದ್ದರೆ ಒಳಿತು. ವಿಷ್ಣು ಸಹಸ್ರನಾಮವನ್ನೇ ಓದಿ.
ಶುಭ ಸಂಖ್ಯೆ : 5-6-10, ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ಚಂದ್ರನ ಆಗಮನ ಮನಸ್ಸಿಗೆ ಮುದು. ಆದರೆ ನಿಮ್ಮದು ಮನಸ್ಸಿನಂತೆ ಮಹಾದೇವ. ಎಚ್ಚರ. ಧನಾಗಮನ. ನಾಗ ದೇವರಿಗೆ ತನು ಸೇವೆ ಮಾಡಿಸಿ.
ಶುಭ ಸಂಖ್ಯೆ : 4-5-1, ಬಣ್ಣ : ಬಿಳಿ-ಕೆಂಪು-ಕೇಸರಿ
ಸಿಂಹ : ಮಿತ್ರನು ಮುಂದಿನ ರಾಶಿಗೆ ಪ್ರಯಾಣ. ತೊಂದರೆ ಇಲ್ಲ. ಆತ್ಮ ಬಲ ಗಟ್ಟಿ ಇದೆ. ಒಳ್ಳೆಯದಿದೆ. ಖರ್ಚು ವಿಪರೀತ. ಮದುವೆಗೆ ಸೂಕ್ತವಲ್ಲ. ಆದಿತ್ಯ ಹೃದಯ ಪಾರಾಯಣ ಮಾಡಿ.
ಶುಭ ಸಂಖ್ಯೆ : 5-6-9-11, ಬಣ್ಣ : ಕೆಂಪು-ಬಿಳಿ
ಕನ್ಯಾ : ಮನೋಕ್ಲೇಶ ಹಾಗೆ ಇದೆ. ಸಹವಾಸ ದಾರಿ ತಪ್ಪಿಸುತ್ತದೆ. ಮನೆಯಲ್ಲೂ ಎಚ್ಚರಿಸುತ್ತಾರೆ. ಆಲಸ್ಯ ಬೇಡ. ದುರ್ಗಾದೇವಿಗೆ ನಮಸ್ಕರಿಸಿ.
ಶುಭ ಸಂಖ್ಯೆ : 7-10-11-03, ಬಣ್ಣ : ಕೆಂಪು-ನೀಲಿ-ಬೂದು
ತುಲಾ : ಚೆನ್ನಾಗಿದೆ. ಖರ್ಚು ವಿಪರೀತ. ಧನದ ಮೂಲ ಹುಡುಕುವಿಕೆ. ಉದ್ಯೋಗದಲ್ಲಿ ಮಿಶ್ರ ಫಲ. ನಾಗನಿಗೆ ಹಾಲಿನ ಸೇವೆ ಮಾಡಿಸಿ.
ಶುಭ ಸಂಖ್ಯೆ : 8-9-4, ಬಣ್ಣ : ನೀಲಿ-ಬಿಳಿ-ಬೂದು
ವೃಶ್ಚಿಕ : ಪಂಚಮದ ರಾಹು ಭಾಧಿಸುತ್ತಾನೆ. ಮನೆಯಲ್ಲೂ ಕಿರಿಕಿರಿ. ವಿವಾಹಕ್ಕೆ ಸೂಕ್ತ ಸಮಯ ಒದಗಿದೆ. ಕಡ್ಲೇಕಾಳು ದಾನ ಮಾಡಿ.
ಶುಭ ಸಂಖ್ಯೆ : 8-1-5, ಬಣ್ಣ : ಕೆಂಪು-ಬಿಳಿ-ಕೇಸರಿ
ಧನು : ಮನೆಯ ವಾತಾವರಣ ಉತ್ತಮ. ಆರೋಗ್ಯ ಉತ್ತಮ. ಹೆಂಡತಿ ಮಕ್ಕಳ ಪ್ರೀತಿ ಸೇರಿ ಶುಭಫಲವೇ ಈದಿನ. ಗುರುಗಳನ್ನು ಪೂಜಿಸಿ.
ಶುಭಸಂಖ್ಯೆ : 9-12-04, ಬಣ್ಣ : ಕೇಸರಿ-ಬಿಳಿ
ಮಕರ : ಒತ್ತಡ ಬಾಧಿಸಲಿದೆ. ಭಡ್ತಿಯ ಯೋಗ. ತೊಂದರೆ ಕೊಡುವವರು ಇದ್ದಾರೆ. ಮನೆಯ ವಾತಾವರಣ ಮಧ್ಯಮ. ಆಂಜನೇಯನಿಗೆ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 10-11-02, ಬಣ್ಣ : ನೀಲಿ-ಬೂದು-ಕಪ್ಪು
ಕುಂಭ : ಶನಿವಾರ ಶ್ರಾವಣ ಮಾಸ ಬಹಳ ಉತ್ತಮ. ಆದರೆ ಇನ್ನೊಬ್ಬರಿಗೆ ನೀವು ಆಗದು. ಮಂದಗತಿಯಿಂದ ಮುಂದೆ ಬನ್ನಿ. ಆಲಸ್ಯ ಬಿಡಿ. ಸಾಡೇಸಾತಿ ಬಾಧಿಸುತ್ತಾನೆ.
ಶುಭ ಸಂಖ್ಯೆ : 11-03-06, ಬಣ್ಣ : ನೀಲಿ-ಬೂದು
ಮೀನ : ಸಹೋದರರ ಪ್ರೀತಿ ಹೆಚ್ಚು. ವಿದ್ಯಾಭ್ಯಾಸ ಹಿನ್ನಡೆ. ಆರೋಗ್ಯ ಉತ್ತಮ. ಅಧಿಕ ಹಣ ವ್ಯಯ. ಆಂಜನೇಯನಿಗೆ ಪಂಚಾಮೃತ ಪೂಜೆ ಸಲ್ಲಿಸಿ.
ಶುಭ ಸಂಖ್ಯೆ : 12-1-8-5, ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ ⇒ ಕುವೆಂಪು ವಿವಿ ಸಿಂಡಿಕೇಟ್‌ಗೆ ಆರು ಸದಸ್ಯರ ನಾಮನಿರ್ದೇಶನ, ಯಾರನ್ನೆಲ್ಲ ನೇಮಿಸಲಾಗಿದೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200