DINA BHAVISHYA, 9 SEPTEMBER 2024
» ಮೇಷ : ಷಷ್ಠದಲ್ಲಿ ಚಂದ್ರ ಕೇತು ಆರೋಗ್ಯದಲ್ಲಿ ಏರು-ಪೇರು. ಯತ್ನ ಕಾರ್ಯದಲ್ಲಿ ತೊಡಕು. ನಷ್ಟ. ಅಧಿಕ ವ್ಯಯ. ಪಂಚಮದ ಬುಧ ಇರುವುದು ಸ್ವಲ್ಪ ಪ್ರಗತಿ ಇರಲಿದೆ. ರಾಯರಿಗೆ ನಮಸ್ಕರಿಸಿ.
![]() |
ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ
» ವೃಷಭ : ಒತ್ತಡ. ಅನಗತ್ಯ ಖರ್ಚು. ಆರೋಗ್ಯ ಸ್ಥಿರ. ಕೆಲಸದಲ್ಲಿ ಸೋಮಾರಿತನ. ಮೊದಲಾದ ಮಿಶ್ರ ಫಲ. ನವಗ್ರಹಗಳಿಗೆ 9 ಬಾರಿ ನಮಸ್ಕರಿಸಿ.
ಶುಭ ಸಂಖ್ಯೆ : 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
» ಮಿಥುನ : ಮನೋಭಿಷ್ಟದ ಕೆಲಸ ಆಗಬಹುದು. ಸ್ಪಷ್ಟ ಭಾಗ್ಯೋದಯವಿಲ್ಲ. ಕೆಲಸದಲ್ಲಿ ಆಯಾಸ ಮುಂದುವರೆಯುತ್ತದೆ. ತೊಗರಿಬೇಳೆ ಬೆಲ್ಲ ದಾನ ಮಾಡಿ. ತುಪ್ಪದ ದೀಪ ಹಚ್ಚಿ.
ಶುಭ ಸಂಖ್ಯೆ : 5-6-10, ಬಣ್ಣ : ಹಳದಿ-ಕೆಂಪು-ಹಸಿರು
» ಕರ್ಕ : ಸಹೋದರರ ಸಣ್ಣ ಕಿರಿಕಿರಿ. ಮನಸ್ಸಿಗೆ ನೋವು. ಅಷ್ಟಮದ ಶನಿ ಆಯಾಸ ಸೋಮಾರಿತನ ನೀಡುತ್ತಿದ್ದಾನೆ. ನಾಗದೇವರಿಗೆ ಫಲಪಂಚಾಮೃತ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 4-5-1, ಬಣ್ಣ : ಬಿಳಿ-ಕೆಂಪು-ಕೇಸರಿ
» ಸಿಂಹ : ನಿಮ್ಮ ಮಾತು ನಡೆಯುವ ದಿನ. ಖರ್ಚು ಹೆಚ್ಚು. ಧನಾಗಮನ ಕಡಿಮೆ. ಉದ್ಯೋಗ ಸ್ಥಿರ. ಆರೋಗ್ಯ ಉತ್ತಮ.
ಶುಭ ಸಂಖ್ಯೆ : 5-6-9-11, ಬಣ್ಣ : ಕೆಂಪು-ಬಿಳಿ
» ಕನ್ಯಾ : ಶತೃಗ್ರಹಗಳ ಸಮಾಗಮ ನಿಮ್ಮ ನಿದ್ದೆ ಕೆಡಿಸಲಿದೆ. ಇದು ತಡವಾದರೂ ಮುನ್ನೆಚ್ಚರಿಕೆ ಅಗತ್ಯ. ವ್ಯಯವಿಲ್ಲ. ಧನಾಮಗನವೂ ಕಡಿಮೆ. ಹಿತಶತೃಗಳ ತೊಂದರೆ.
ಶುಭ ಸಂಖ್ಯೆ : 7-10-11-03, ಬಣ್ಣ : ಕೆಂಪು-ನೀಲಿ-ಬೂದು
» ತುಲಾ : ಮನಸ್ಸಿನಲ್ಲಿ ಚಿಂತೆ. ಪಂಚಮದ ಶನಿ ಬಾಧಿಸುತ್ತಿದ್ದಾನೆ. ಉದ್ಯೋಗದಲ್ಲಿ ಏರು-ಪೇರು. ಅಧಿಕ ವ್ಯಯ. ನವಗ್ರಹರನ್ನು ಪೂಜಿಸಿ.
ಶುಭ ಸಂಖ್ಯೆ : 8-9-4, ಬಣ್ಣ : ನೀಲಿ-ಬಿಳಿ-ಬೂದು
» ವೃಶ್ಚಿಕ : ಖುಷಿ ಎದುರಿಗೆ ಇದೆ. ಪ್ರಯೋಜನವಿಲ್ಲ. ಐದರ ರಾಹು. ಲಾಭದ ಕೇತು ತೊಂದರೆ. ಸ್ಥಿರಾಸ್ತಿ ಯೋಗವಿದೆ. ಗಣೇಶನ ಪೂಜೆ ಮಾಡಿ.
ಶುಭ ಸಂಖ್ಯೆ : 8-1-5, ಬಣ್ಣ : ಕೆಂಪು-ಬಿಳಿ-ಕೇಸರಿ
» ಧನು : ಆರೋಗ್ಯ ಉತ್ತಮ. ಮನೆಯೋಡತಿಯ ಸಹಕಾರ. ಅಂದುಕೊಂಡ ಕಾರ್ಯ ಸಾಧನೆ. ಸ್ವಲ್ಪ ಬಾಧೆ. ಕೆಲಸ ಕಡಿಮೆ. ಓಂ ಶ್ರೀಧರಾಯನಮಃ ನಾಮ ಜಪವನ್ನೆ ಮಾಡಿ.
ಶುಭ ಸಂಖ್ಯೆ : 9-12-04, ಬಣ್ಣ : ಕೇಸರಿ-ಬಿಳಿ
» ಮಕರ : ಧನಪ್ರಾಪ್ತಿ. ವಿದ್ಯಾಭ್ಯಾಸದಲ್ಲಿ ಸುಖ. ವೃಥಾ ತಿರುಗಾಟ. ತೊಂದರೆ ಇಲ್ಲ. ಸ್ವಲ್ಪ ಒಳ್ಳೆಯದಿದೆ. ಹುರಳಿ ಧಾನ್ಯ ದಾನ ಮಾಡಿ.
ಶುಭ ಸಂಖ್ಯೆ: 10-11-02 ಬಣ್ಣ: ನೀಲಿ-ಬೂದು-ಕಪ್ಪು
» ಕುಂಭ : ಮನೋವ್ಯಥೆ ಮುಂದುವರೆದಿದೆ. ನಿಮ್ಮ ಆತ್ಮಬಲ ನಿಮ್ಮನ್ನು ಕಾದಿದೆ. ಮನೆಯಿಂದ ಖುಷಿ. ಕೇತು ಪೂಜೆ ಮಾಡಿಸಿ.
ಶುಭ ಸಂಖ್ಯೆ : 11-03-06, ಬಣ್ಣ: ನೀಲಿ-ಬೂದು
» ಮೀನ : ದೇಹದಲ್ಲಿ ಸೌಖ್ಯ ಕಡಿಮೆ. ಬುದ್ಧಿ ವೈಖಲ್ಯ. ಆಲಸ್ಯ. ಹಣವಿದ್ದರೂ ಸುಖವಿಲ್ಲ ಈದಿನ. ಎಳ್ಳೆಣ್ಣೆ ದಾನ ಮಾಡಿ.
ಶುಭ ಸಂಖ್ಯೆ : 12-1-8-5, ಬಣ್ಣ: ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ಸಾವಿರ ಕೋಟಿಯ ಶಿವಮೊಗ್ಗ ಸ್ಮಾರ್ಟ್ ಸಿಟಿಯಲ್ಲಿ ಓಡಾಡುವಾಗ ಎಚ್ಚರ.. ಎಚ್ಚರ.., ಯಾಕೆ ಗೊತ್ತಾ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200