ಮೇಷ
ಇಡೀ ದಿನ ಆಹ್ಲಾದಕರವಾಗಿರುತ್ತದೆ. ಸ್ನೇಹಿತರೊಂದಿಗೆ ಸುತ್ತಾಡಲು ತೆರಳುವಿರಿ. ಹಣ ಹೆಚ್ಚಾಗಿ ಖರ್ಚಾಗುತ್ತದೆ. ಈ ಕುರಿತು ನಿಗಾ ಇರಲಿ. ನಿಮ್ಮ ಆಲೋಚನೆಗಳನ್ನು ಚನ್ನಾಗಿ ಪ್ರಸ್ತುತಪಡಿಸುತ್ತೀರಿ. ಇದರಿಂದ ಕೆಲಸದ ಸ್ಥಳದಲ್ಲಿ ನಿಮಗೆ ಲಾಭವಾಗಲಿದೆ.
ವೃಷಭ
ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಬೇಕಿದೆ. ಇವತ್ತು ಸ್ವಲ್ಪ ಒತ್ತಡ ಮುಕ್ತವಾಗಿರುತ್ತದೆ. ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ. ವ್ಯವಹಾರದ ಪಾಲುದಾರರ ವಿರುದ್ಧ ಬೇಸರ ಮಾಡಿಕೊಳ್ಳಬೇಡಿ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಿಥುನ
ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಮುಖ್ಯಸ್ಥರ ಕೋಪಕ್ಕೆ ತುತ್ತಾಗುತ್ತೀರಿ. ಮನೆಯಲ್ಲಿ ಸಂಗಾತಿಯೊಂದಿಗೆ ಮುನಿಸು.
ಕರ್ಕಾಟಕ
ಅನಿರೀಕ್ಷಿತವಾಗಿ ಒಳ್ಳೆಯ ಸುದ್ದಿ ಸಿಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲ್ವಿಚಾರಕರು ನಿಮ್ಮೊಂದಿಗೆ ಉತ್ತಮವಾಗಿ ನಡೆದುಕೊಳ್ಳಲಿದ್ದಾರೆ. ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಸಂಗಾತಿಯೊಂದಿಗೆ ಸಂತೋಷವಿರಲಿದೆ.
ಸಿಂಹ
ಹಣದ ಚಿಂತೆ ಮೂಡಲಿದೆ. ಸ್ನೇಹಿತರಿಂದ ಸಾಲ ಕೇಳಬೇಕಾದ ಪರಿಸ್ಥಿತಿ. ಯಾವುದೆ ಕೆಲಸಕ್ಕೆ ಇವತ್ತು ನಿಗದಿಗಿಂತಲೂ ಹೆಚ್ಚು ಪ್ರಯತ್ನ ಪಡಬೇಕಾಗುತ್ತದೆ. ಯಶಸ್ಸು ಸಿಗಲಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಕನ್ಯಾ
ಆಹಾರ ಸೇವನೆಯ ಮೇಲೆ ನಿಗಾ ಇರಲಿ. ಇವತ್ತು ಹಣದ ಅಪವ್ಯಯ ಸಾಧ್ಯತೆ. ಮನೆ ಕೆಲಸದಿಂದ ಹೈರಾಣಾಗುವಿರಿ. ಮಾನಸಿಕ ಒತ್ತಡ ಇರಲಿದೆ.
ತುಲಾ
ಅನಗತ್ಯ ಒತ್ತಡದಿಂದ ದೂರವಿರಲು ಪ್ರಯತ್ನಿಸಿ. ಭೂಮಿ ಖರೀದಿ ಮತ್ತು ಮಾರಾಟಕ್ಕೆ ಉತ್ತಮ ದಿನ. ಮಕ್ಕಳ ಪ್ರೀತಿ ಸಂಪಾದಿಸಿ. ಹೊಸ ಕೆಲಸ ಹುಡುಕಲು ಇದು ಸಕಾಲ.
ವೃಶ್ಚಿಕ
ಇವತ್ತು ಮನೆಗೆ ಸಂಬಂಧಿಸಿದಂತೆ ಹೂಡಿಕೆ ಮಾಡಲು ಅತ್ಯುತ್ತಮ ದಿನ. ನಿಮ್ಮ ವ್ಯಕ್ತಿತ್ವ ಹಲವರನ್ನು ಆಕರ್ಷಿಸಲಿದೆ. ನಿಮ್ಮ ಸೃಜನಶೀಲತೆ ಕಾರಣಕ್ಕೆ ಕೆಲಸದ ಸ್ಥಳದಲ್ಲಿ ಎಲ್ಲರು ನಿಮ್ಮತ್ತ ಗಮನ ಕೇಂದ್ರೀಕರಿಸಲಿದ್ದಾರೆ.
ಧನುಸ್ಸು
ಆರ್ಥಿಕ ಲಾಭವಿದೆ. ಸ್ನೇಹಿತರು ಮತ್ತು ಅಪರಿಚಿತರ ಕುರಿತು ಎಚ್ಚರವಿರಲಿ. ಕೈಗೊಂಡ ಕಾರ್ಯಗಳು ನಿರೀಕ್ಷೆಯಂತೆ ನಿಮ್ಮ ಗುರಿ ತಲುಪುವುದಿಲ್ಲ. ಸಂಗಾತಿಯಿಂದ ನೆರವು
ಮಕರ
ಆಪ್ತರೊಂದಿಗೆ ಜಗಳ ಸಾಧ್ಯತೆ. ಆರಕ್ಷಕರವರೆಗೆ ವಿಷಯ ತಲುಪಲಿದೆ. ಅಮೂಲ್ಯ ಸಮಯ ವ್ಯರ್ಥವಾಗಲಿದೆ. ವೃತ್ತಿಯಲ್ಲಿ ತೊಡಿಗಿಸಿಕೊಳ್ಳುವುದಕ್ಕಿಂತಲು ಹೊರಗೆ ಹೆಚ್ಚು ಸಮಯ ಕಳೆಯಬೇಕಾಗುತ್ತದೆ.
ಕುಂಭ
ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಉತ್ತಮವಾದ ದಿನ. ಸಂಬಂಧಿಕರು ಸಾಲ ಕೇಳಿ ಬರುತ್ತಾರೆ. ಕೊಡುವಾಗ ಎಚ್ಚರ ವಹಿಸಿ. ಪ್ರಯತ್ನಕ್ಕೆ ತಕ್ಕ ಫಲ ದೊರೆಯಲಿದೆ.
ಮೀನಾ
ಪ್ರೀತಿ, ಪ್ರೇಮದ ವಿಚಾರದಲ್ಲಿ ಬಹಳಷ್ಟು ತೊಂದರೆ ಉಂಟಾಗಲಿದೆ. ನೀವು ಬಯಸುವ ಹೊಗಳಿಕೆಯ ಮಾತುಗಳನ್ನು ಇಂದು ಕೇಳುವಂತಾಗಲಿದೆ. ಸಂಗಾತಿಯೊಂದಿಗೆ ಸ್ವಲ್ಪ ಕಸಿವಿಸಿಯಾಗಲಿದೆ.
ಇದನ್ನೂ ಓದಿ – ಅಡಕೆ ಧಾರಣೆ | 22 ಮೇ 2023 | ಯಾವ ಅಡಕೆಗೆ ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?