ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 12 JULY 2023
SHIMOGA : ರಸ್ತೆಯಲ್ಲಿ ಸಾಗುತ್ತಿದ್ದ ದನವೊಂದಕ್ಕೆ ವಿದ್ಯುತ್ ಶಾಕ್ (Electric Shock) ಹೊಡೆದು ಸ್ಥಳದಲ್ಲೆ ಸಾವನ್ನಪ್ಪಿದೆ. ನಿತ್ಯ ಸಾವಿರಾರು ಜನರು ಓಡಾಡುವ ರಸ್ತೆಯಲ್ಲಿ ದುರ್ಘಟನೆ ಸಂಭವಿಸಿದ್ದು ಆತಂಕಕ್ಕೆ ಕಾರಣವಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ನವುಲೆ ಕಡೆಗೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳದ ಪಕ್ಕದ ಮನೆ ಮುಂಭಾಗ ದನಕ್ಕೆ ವಿದ್ಯುತ್ ಶಾಕ್ (Electric Shock) ತಗುಲಿದೆ. ನಡೆದು ಹೋಗುತ್ತಿದ್ದ ದನ ದಿಢೀರ್ ಕುಸಿದು ಬಿದ್ದು, ಒದ್ದಾಡಿ ಪ್ರಾಣ ಬಿಟ್ಟಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಏನಿದು ಘಟನೆ? ಆಗಿದ್ದೇನು?
ನವುಲೆಯಿಂದ ಬಂದಿದ್ದ ದನವೊಂದು ಸವಳಂಗ ರಸ್ತೆಯಲ್ಲಿ ಸಾಗುತ್ತಿತ್ತು. ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಮೊದಲ ಪಿಲ್ಲರ್ ಎದುರಿನ ಮನೆ ಮುಂದೆ, ಬಾಕ್ಸ್ ಚರಂಡಿ ಮೇಲೆ ತೆರಳುತ್ತಿದ್ದಾಗ ದನಕ್ಕೆ ವಿದ್ಯುತ್ ಶಾಕ್ ಹೊಡೆದಿದೆ. ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವೈಯರ್ ಬಾಕ್ಸ್ ಚರಂಡಿ ಮೇಲೆ ಹಾಕಲಾಗಿತ್ತು. ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ವಾಹನಗಳು ಇದೆ ಬಾಕ್ಸ್ ಚರಂಡಿ ಮೇಲೆ ಹಾದು ಹೋಗುತ್ತಿದ್ದವು. ಹಾಗಾಗಿ ವಯರ್ ಸವೆದು ಹೋಗಿತ್ತು. ದನ ಅದರ ಮೇಲೆ ಕಾಲಿಟ್ಟಾಗ ಶಾಕ್ ಹೊಡೆದಿದೆ.
ಇದನ್ನೂ ಓದಿ – ‘ಶಿವಮೊಗ್ಗ ನಗರಕ್ಕೆ ಮಂಜೂರಾಗಿದ್ದ ಸರ್ಕಾರಿ ಬಸ್ಸುಗಳು ಎಲ್ಲಿ?’
ತಪ್ಪಿತು ದೊಡ್ಡ ಅನಾಹುತ
ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಇದೆ ರಸ್ತೆಯಲ್ಲಿ ಓಡಾಡುತ್ತಾರೆ. ಈ ವಯರ್ ಮೇಲೆ ಜನರು ಕಾಲಿಟ್ಟಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸದ್ಯತೆ ಇತ್ತು. ದನಕ್ಕೆ ವಿದ್ಯುತ್ ಶಾಕ್ ಹೊಡೆದ ವಿಚಾರ ತಿಳಿಯುತ್ತಿದ್ದಂತೆ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದರು. ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ವಯರ್ ಕಟ್ ಮಾಡಿದರು.