ಕಸದ ವಿಚಾರ, ನೆರೆ ಮನೆಯವರ ಮೇಲೆ ಹಲ್ಲೆ
SHIVAMOGGA LIVE NEWS | 22 JANUARY 2024
SHIMOGA : ಕಸ ಹಾಕುವ ವಿಚಾರವಾಗಿ ನೆರೆಹೊರೆ ಮನೆಯವರ ಮಧ್ಯೆ ಗಲಾಟೆಯಾಗಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಶರಾವತಿ ನಗರದಲ್ಲಿ ಘಟನೆ ಸಂಭವಿಸಿದೆ. ಪಕ್ಕದ ಮನೆಯವರು ತಮ್ಮ ಮನೆ ಬಾಗಿಲಿಗೆ ಕಸ ಹಾಕಿದ್ದನ್ನು ನರ್ಸ್ ಪ್ರಶ್ನಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ತಮ್ಮ ಕುಟಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಒತ್ತಿ.