ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 ಮಾರ್ಚ್ 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ರೈತರ ಪಂಪ್ ಸೆಟ್’ಗಳಿಗೆ ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ರೈಲ್ವೆ ನಿಲ್ದಾಣದ ಬಳಿ ಇರುವ ಮೆಸ್ಕಾಂ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.
ರೈತರ ಡಿಮಾಂಡ್’ಗಳೇನು?
ಡಿಮಾಂಡ್ 1 : ಹಗಲು ಹೊತ್ತಿನಲ್ಲಿ 7 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು.
ಡಿಮಾಂಡ್ 2 : ಸುಟ್ಟು ಹೋದ ಟಿಸಿಗಳನ್ನು 72 ಗಂಟೆಯೊಳಗೆ ಬದಲಿಸಬೇಕು. ಅವಶ್ಯಕತೆ ಇರುವ ಕಡೆ ಹೊಸ ಟಿಸಿ ಅಳವಡಿಸಬೇಕು.
ಡಿಮಾಂಡ್ 3 : ಜಿಲ್ಲೆಯ ವಿವಿಧೆಡೆ ಹೊಸ ವಿದ್ಯುತ್ ಪೂರೈಕೆ ಸ್ಟೇಷನ್ ಆರಂಭ ಮಾಡಬೇಕು.
ಡಿಮಾಂಡ್ 4 : ಐಪಿ ಸೆಟ್ ಅಕ್ರಮ ಸಕ್ರಮಕ್ಕೆ ಹೆಚ್ಚುವರಿ ಹಣ ಕಟ್ಟಿಸಿಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಕೆಲವರಿಂದ ಹಣ ಕಟ್ಟಿಸಿಕೊಂಡು ನಾಲ್ಕು ವರ್ಷ ಕಳೆದರೂ ಕಂಬ, ತಂತಿ ಹಾಕಿಲ್ಲ.
ಡಿಮಾಂಡ್ 5 : ಗ್ರಾಮಗಳಲ್ಲಿ ಹಳೆ ಕಂಬ, ತಂತಿಗಳನ್ನು ಬದಲಾಯಿಸಬೇಕು. ಇನ್ನು, ಗ್ರಾಮಗಳಲ್ಲಿ ವಿಧಿಸುತ್ತಿರುವ ಮಾಸಿಕ ನಿಗದಿತ ಶುಲ್ಕ ಕೈಬಿಡಬೇಕು.
ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಪ್ರಮುಖರಾದ ರಾಘವೇಂದ್ರ, ರಾಮಚಂದ್ರಪ್ಪ, ಮಂಜಪ್ಪ, ಜಗದೀಶ್, ಈಶಣ್ಣ, ಚಂದ್ರಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200