ಶಿವಮೊಗ್ಗ ಲೈವ್.ಕಾಂ | 25 ಫೆಬ್ರವರಿ 2019
ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ತರುವ ಮೂಲಕ ಬೀದಿಗೆ ಬೀಳಲಿರುವ ಆದಿವಾಸಿಗಳು ಮತ್ತು ಬುಡಕಟ್ಟು ಜನರ ಬದುಕಿನ ಹಕ್ಕನ್ನು ರಕ್ಷಣೆ ಮಾಡಬೇಕೆಂದು ರಾಜ್ಯ ಅರಣ್ಯ ಮೂಲ ಬುಡಕಟ್ಟು ಒಕ್ಕೂಟ ಹಾಗೂ ಸ್ವರಾಜ್ ಅಭಿಯಾನ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವರಾಜ್ ಅಭಿಯಾನದ ಜಿಲ್ಲಾ ಸಂಚಾಲಕ ಎನ್.ಶಿವಾನಂದ ಕುಗ್ವೆ, ಅರಣ್ಯ ಹಕ್ಕು ಕಾಯ್ದೆಯಡಿ ತಮ್ಮ ಅರಣ್ಯ ಭೂಮಿಯ ಮೇಲೆ ಹಕ್ಕು ಕೋರಿ ಸಲ್ಲಿಸಿದ್ದ ಅರ್ಜಿಗಳ ಪೈಕಿ ತಿರಸ್ಕೃತಗೊಂಡ ಎಲ್ಲ ಕುಟುಂಬಗಳನ್ನು ಇನ್ನು 4 ತಿಂಗಳಲ್ಲಿ ತೆರವು ಮಾಡುವ ಕಾರ್ಯ ಕೂಡಲೇ ಆರಂಭಿಸಬೇಕು ಎಂದು ಸುಪ್ರಿಂ ಕೋರ್ಟ್ ತೀರ್ಪು ನೀಡಿರುವುದರಿಂದ ಅರಣ್ಯವಾಸಿ ಸಮುದಾಯಗಳಿಗೆ, ಅರಣ್ಯ ಬುಡಕಟ್ಟು ಜನಾಂಗಗಳಿಗೆ ಅತ್ಯಂತ ಆತಂಕ ಸೃಷ್ಟಿಸಿದೆ ಎಂದರು.
ಕೇಂದ್ರ ಸರ್ಕಾರ ಕೂಡಲೇ ಸುಗ್ರೀವಾಜ್ಞೆ ತರುವ ಮೂಲಕ ಅರಣ್ಯವಾಸಿಗಳ ಆತಂಕ ದೂರ ಮಾಡಬೇಕಿದೆ. ಇಲ್ಲವಾದರಲ್ಲಿ ಪಾರ್ಲಿಮೆಂಟ್’ಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಶಿವಾನಂದ ಕುಗ್ವೆ ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅರಣ್ಯ ಮೂಲ ಬುಡಕಟ್ಟು ಒಕ್ಕೂಟದ ಸಂಚಾಲಕ ರಾಮಣ್ಣ ಹಸಲರು, ಭಾಗ್ಯ ಪಿ.ಗೌಡ, ಲಕ್ಷ್ಮಮ್ಮ ಹಿರೇಮನೆ, ನರಸಿಂಹ, ಸೀತಾರಾಂ ಇನ್ನಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]