ಶಿವಮೊಗ್ಗ ಲೈವ್.ಕಾಂ | SHIMOGA NEWS | 31 ಮೇ 2020
ಬಂದೋಬಸ್ತ್ ಡ್ಯೂಟಿಗಾಗಿ ಬೆಂಗಳೂರಿಗೆ ಹೋಗಿ ಶಿವಮೊಗ್ಗಕ್ಕೆ ಹಿಂತಿರುಗಿದ್ದ ಮೂವರು ಪೊಲೀಸರಿಗೆ ಕರೋನ ಪಾಸಿಟಿವ್ ಬಂದಿದೆ. ಇದರಿಂದ ಮಾಚೇನಹಳ್ಳಿಯ ಕೆಎಸ್‍ಆರ್‍ಪಿ ಬೆಟಾಲಿಯನ್‍ನಲ್ಲಿ ಆತಂಕ ಸೃಷ್ಟಿಯಾಗಿದೆ.
ಯಾವೆಲ್ಲ ಪೊಲೀಸರಿಗೆ ಕರೋನ ಪಾಸಿಟವ್ ಬಂದಿದೆ?
ಪಿ2830 – 23 ವರ್ಷದ ಪುರುಷ – ಬೆಂಗಳೂರಿನಿಂದ ಹಿಂತಿರುಗಿದ್ದರು
ಪಿ2852 – 23 ವರ್ಷದ ಪುರುಷ – ಬೆಂಗಳೂರಿನಿಂದ ಹಿಂತಿರುಗಿದ್ದರು
ಪಿ2882 – 29 ವರ್ಷದ ಪುರುಷ – ಬೆಂಗಳೂರಿನಿಂದ ಹಿಂತಿರುಗಿದ್ದರು
54 ಜನರು ಒಟ್ಟಿಗೆ ಮರಳಿದ್ದರು
ಮಾಚೇನಹಳ್ಳಿಯ ಜಯಂತಿ ಗ್ರಾಮದಲ್ಲಿರುವ ಕೆಎಸ್‍ಆರ್‍ಪಿ ಬೆಟಾಲಿಯನ್‍ನಿಂದ 54 ಮಂದಿ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಬಂದೋಬಸ್ತ್ ಡ್ಯೂಟಿ ಮುಗಿಸಿ ಬಸ್‍ನಲ್ಲಿ ಹಿಂತಿರುಗಿದ್ದರು. ಈ ಪೈಕಿ ಮೂವರಲ್ಲಿ ಸೋಂಕು ಪತ್ತೆಯಾಗಿದ್ದು, ಕೂಡಲೆ ಅವರನ್ನು ಚಕಿತ್ಸೆಗೆ ಒಳಪಡಿಸಲಾಗಿದೆ.
ಪ್ರೈಮರಿ ಕಾಂಟ್ಯಾಕ್ಟ್ ಎಷ್ಟು ಗೊತ್ತಾ?
ಮೂವರು ಕಾನ್ಸ್‍ಟೇಬಲ್‍ಗಳಿಗೆ ಕರೋನ ಪಾಸಿಟಿವ್ ಬಂದಿರುವ ಹಿನ್ನೆಲೆ ಪ್ರಾಥಮಿಕ ಮತ್ತು ಸಕೆಂಡರಿ ಕಾಂಟ್ಯಾಕ್ಟ್‍ಗಳನ್ನು ಪತ್ತೆ ಹಚ್ಚಲಾಗಿದೆ. 54 ಸಿಬ್ಬಂದಿಗಳ ಪೈಕಿ 15 ಜನರನ್ನು ಪ್ರಾಥಮಿಕ ಸಂಪರ್ಕ ಎಂದು ಗುರುತಿಸಲಾಗಿದೆ. 36 ಮಂದಿಯನ್ನು ದ್ವಿತೀಯ ಸಂಪರ್ಕ ಎಂದು ಗುರುತಿಸಿ ಆರೋಗ್ಯ ಪರಿಶೀಲನೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200