ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 27 ಡಿಸೆಂಬರ್ 2019
ಸ್ನೇಹಿತನ ಕಾರು ಮತ್ತು ಹಣವನ್ನೇ ಕದ್ದಿದ್ದ ಕಳ್ಳನೊಬ್ಬನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಗೆಳೆಯನ ಜೊತೆಗೆ ಲಾಡ್ಜ್’ನಲ್ಲಿ ಉಳಿದುಕೊಂಡಿದ್ದಾಗಲೇ, ಈ ಖದೀಮ ತನ್ನ ಖತರ್ನಾಕ್ ಬುದ್ದಿ ಪ್ರದರ್ಶಿಸಿದ್ದ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬಿಜಾಪುರದ ಇಂಡಿ ತಾಲೂಕಿನ ಭುಯಾರ್ ಗ್ರಾಮದ ಆಕಾಶ್ ಸಿಂದಗಿ (20) ಬಂಧಿತ. ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಈತನನ್ನು ಬಂಧಿಸಿದ್ದಾರೆ.
ಗೆಳೆಯನ ಕಾರು, ದುಡ್ಡು ಕದ್ದ
ಶಿವಮೊಗ್ಗದ ಕೃಷಿ ನಗರ ನಿವಾಸಿ ಪ್ರದೀಪ್, ತನ್ನ ಸ್ನೇಹಿತ ಆಕಾಶ್ ಜೊತೆಗೆ ನೆಹರೂ ರಸ್ತೆಯ ಲಾಡ್ಜ್ ಒಂದರಲ್ಲಿ ತಂಗಿದ್ದರು. ಈ ವೇಳೆ ಪ್ರದೀಪ್’ಗೆ ಸೇರಿದ್ದ 12 ಲಕ್ಷ ಮೌಲ್ಯದ ಡಸ್ಟರ್ ಕಾರು ಮತ್ತು 41 ಸಾವಿರ ರೂ. ಹಣ ಕಳ್ಳತನ ಮಾಡಿಕೊಂಡು ಹೋಗಿದ್ದ.
ಈ ಕುರಿತು ಪ್ರದೀಪ್ ಕೋಟೆ ಠಾಣೆಯಲ್ಲಿ ದೂರು ನೀಡಿದ್ದ. ಡಿವೈಎಸ್’ಪಿ ಉಮೇಶ್ ಈಶ್ವರ್ ನಾಯ್ಕ್, ಇನ್ಸ್’ಪೆಕ್ಟರ್ ಮಾದಪ್ಪ ಅವರ ನೇತೃತ್ವದಲ್ಲಿ ಪಿಎಸ್ಐ ರಾಹತ್ ಅಲಿ, ಸಿಬ್ಬಂದಿಗಳಾದ ಸುರೇಶ್, ಗೋಪಾಲ್, ಕಲ್ಲನಗೌಡ ನೇತೃತ್ವದ ತಂಡ ಕಳ್ಳನನ್ನು ಬಂಧಿಸಿ, ಕಾರು, ಹಣವನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]