ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | 22 ಮಾರ್ಚ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆ, ನ್ಯಾಯಾಲಯದ ಆದೇಶದಂತೆ ಸಾಗರ ಉಪ ವಿಭಾಗಾಧಿಕಾರಿ ಕಾರನ್ನು ಜಪ್ತಿ ಮಾಡಲಾಗಿದೆ. ಶಿಕಾರಿಪುರದ ಅಂಬ್ಲಿಗೊಳ ಜಲಾಶಯದ ಕೋಡಿ ಮತ್ತು ಏರಿ ಎತ್ತರಿಸುವ ಯೋಜನೆ ಸಂಬಂಧ ಸಾಗರ ತಾಲೂಕಿನ ರೈತರಿಗೆ ನೀಡಬೇಕಾದ ಹೆಚ್ಚುವರಿ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗಿತ್ತು.
ಈ ಕಾಮಗಾರಿಯಿಂದ ಸಾಗರ ತಾಲೂಕಿನ ಆನಂದಪುರ ಹೋಬಳಿಯ ನಾಡವಳ್ಳಿ, ಗೌತಮಪುರ, ಭೈರಾಪುರ, ಕುಡಿಗೆರೆ ಗ್ರಾಮದ 22 ರೈತರಿಗೆ ಸಂಬಂಧಿಸಿದ ಜಮೀನುಗಳನ್ನು 2007 – 08ರಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಪರಿಹಾರ ನೀಡಲು ವಿಳಂಬ ಮಾಡಿದ್ದರಿಂದ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಜಪ್ತಿಯಾಯ್ತು ಎಸಿ ಕಾರು
ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ 2018ರ ಆಗಸ್ಟ್ 18ರಂದು ತೀರ್ಪು ನೀಡಿದ್ದ ನ್ಯಾಯಾಲಯ 22 ರೈತರಿಗೆ 31,88,643 ರೂ. ಪರಿಹಾರ ನೀಡುವಂತೆ ಸೂಚಿಸಿತ್ತು. ಆದರೆ ಶಿಕಾರಿಪುರದ ಕರ್ನಾಟಕ ನೀರಾವರಿ ನಿಗಮದ ದಂಡಾವತಿ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರರು ಈವರೆಗೂ ಪಾಲಿಸಿರಲಿಲ್ಲ. ಹಾಗಾಗಿ ಉಪ ವಿಭಾಗಾಧಿಕಾರಿ ಕಾರನ್ನೇ ಜಪ್ತಿ ಮಾಡುವಂತೆ ಕೋರ್ಟ್ ಸೂಚಿಸಿತು.
ಕಾರು ಜಪ್ತಿ ಇದೇ ಮೊದಲ್ಲಲ್ಲ
ಸಾಗರ ಎಸಿ ಕಾರು ಜಪ್ತಿ ಆಗುತ್ತಿರುವುದು ಇದೇ ಮೊದಲಲ್ಲ. ಮರಳು ತೆಗೆಯಲು ನಿಷೇಧ ಹೇರಿದ ಪ್ರಕರಣ ಸಂಬಂಧ, ದಂಡ ಕಟ್ಟಲು ವಿಳಂಬ ಮಾಡಿದ್ದಕ್ಕೆ, ಕಳೆದ ವರ್ಷ ಸಾಗರ ಎಸಿ ಕಾರು ಜಪ್ತಿ ಮಾಡಲಾಗಿತ್ತು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]