
ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಜುಲೈ 2020
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:
ಮನೆ ಮುಂದೆ ನಿಲ್ಲಿಸಿದ್ದ ಆಟೋಗೆ ರಾತ್ರಿ ಬೆಂಕಿ ಹಚ್ಚಿದ್ದ ಕಿಡಿಗೇಡಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೀಗೆಹಟ್ಟಿಯಲ್ಲಿ ಘಟನೆ ನಡೆದಿತ್ತು.
ಬೆಂಕಿ ಹಚ್ಚಿದ ಕಿಡಿಗೇಡಿಗಳ್ಯಾರು?
ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಮಿಳಘಟ್ಟದ ಸ್ಟೀಫನ್ ಕುಮಾರ್ (22) ಮತ್ತು ಆಶ್ರಯ ಬಡಾವಣೆಯ ಮೆಹಬೂಬ್ (34) ಎಂಬುವವರನ್ನು ಬಂಧಿಸಲಾಗಿದೆ. ಜು.17ರಂದು ರಾತ್ರಿ 3.30ಕ್ಕೆ ಸೀಗೆಹಟ್ಟಯಲ್ಲಿ ಬಿ.ಬಿ.ಸ್ಟ್ರೀಟ್ನಲ್ಲಿ ನಿಲ್ಲಿಸಿದ್ದ ಆಟೋಗೆ ಬೆಂಕಿ ಹಚ್ಚಿದ್ದರು.

ಸಚಿವರು ಗರಂಗ ಆಗಿದ್ದರು
ಘಟನೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ಸಂಬಂಧ ಡಿವೈಎಸ್ಪಿ ಉಮೇಶ್ ಈಶ್ವರ ನಾಯಕ್ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಸಿಪಿಐ ವಸಂತ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಬೆಂಕಿ ಇಡಲು ತಂದ ಬೈಕ್ ವಶ
ಇನ್ನು, ಘಟನೆ ವೇಳೆ ಬೈಕ್ನಲ್ಲಿ ಬಂದು ಬೆಂಕಿ ಹಚ್ಚಲಾಗಿತ್ತು. ಈ ಹಿನ್ನೆಯಲ್ಲಿ ಕಿಡಿಗೇಡಿಗಳು ಕೃತ್ಯಕ್ಕೆ ಬಳಸಿದ್ದ ಬೈಕನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು






