ಶಿವಮೊಗ್ಗ ಲೈವ್.ಕಾಂ | SHIMOGA | 21 ಅಕ್ಟೋಬರ್ 2019

ಕರ್ತವ್ಯದಲ್ಲಿದ್ದು ದೇಶಾದ್ಯಂತ ಮರಣವನ್ನಪ್ಪಿದ ಪೊಲೀಸರಿಗೆ ಇವತ್ತು ಜಿಲ್ಲಾ ಪೊಲೀಸ್ ವತಿಯಿಂದ ನಮನ ಸಲ್ಲಿಸಲಾಯಿತು. ಹುತಾತ್ಮ ದಿನಾಚರಣೆ ಆಂಗವಾಗಿ ಡಿಎಆರ್ ಮೈದಾನದಲ್ಲಿ ಪೊಲೀಸರು ಗೌರವ ಸಮರ್ಪಣೆ ಮಾಡಿದರು.
ಪ್ರಧಾನ ಜಿಲ್ಲ ಮತ್ತು ನ್ಯಾಯಾಧೀಶರಾದ ನ್ಯಾ.ಮಾಸ್ಟರ್ ಆರ್.ಕೆ.ಜಿ.ಎಂ.ಎಂ.ಮಹಾಸ್ವಾಮೀಜಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ಹೆಚ್ಚುವರಿಗೆ ರಕ್ಷಣಾಧಿಕಾರಿ ಶೇಖರ್ ಸೇರಿದಂತೆ ಹಲವರು ಗೌರವ ಪುಷ್ಪಗುಚ್ಚ ಇರಿಸಿ ನಮನ ಸಲ್ಲಿಸಿದರು. ಇದೇ ವೇಳೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]