SHIVAMOGGA LIVE NEWS | 5 SEPTEMBER 2023
SHIMOGA : ಬಸ್ ಹತ್ತುವ ವೇಳೆ ಮಹಿಳೆಯ ಬಳಿ ಇದ್ದ ವ್ಯಾನಿಟಿ ಬ್ಯಾಗಿನ್ (Vanity Bag) ಜಿಪ್ ತೆಗೆದು ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಆ.29ರಂದು ಘಟನೆ ಸಂಭವಿಸಿದೆ.
ಮುಜಿಬುಲ್ ಹಲಗೇರಿ, ಅವರ ಪತ್ನಿ ಶಾಹೀನಾ ಅವರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶಿಕಾರಿಪುರ ಬಸ್ ಹತ್ತಿದ್ದರು. ಟಿಕೆಟ್ ಹಣಕ್ಕಾಗಿ ವ್ಯಾನಿಟಿ ಬ್ಯಾಗ್ ತೆಗೆಯಲು ಮುಂದಾದಾಗ ಜಿಪ್ ತೆರೆದುಕೊಂಡಿತ್ತು. ಪರಿಶೀಲಿಸಿದಾಗ ಬಿಳಿ ಪರ್ಸ್ ಕಳ್ಳತನವಾಗಿತ್ತು. ಅದರಲ್ಲಿ 56 ಸಾವಿರ ರೂ. ಮೌಲ್ಯದ ಚಿನ್ನಾಭರಣ, ಒಂದು ಸಾವಿರ ರೂ. ನಗದು ಇತ್ತು ಎಂದು ದೂರಿನಲ್ಲಿ ಆಪಾದಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿವಮೊಗ್ಗ ನಗರದಲ್ಲಿ ಗುಡುಗು ಸಹಿತ ಮಳೆ