ಶಿವಮೊಗ್ಗ: ಕೃಷಿ ಇಲಾಖೆಯಲ್ಲಿ ಆತ್ಮ ಯೋಜನೆಯಡಿ ನೇರ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಹೊಸನಗರ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಹಾಗೂ ಶಿವಮೊಗ್ಗದ ಜಂಟಿ ನಿರ್ದೇಶಕರ ಕಛೇರಿಯಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್, ಅಪರೇಟರ್ ಹುದ್ದೆಗೆ (Jobs) ಅರ್ಜಿಯನ್ನು ಆಹ್ವಾನಿಸಲಾಗಿದೆ.
ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಕೃಷಿ ಪದವಿ ಜೊತೆಗೆ 5 ವರ್ಷ ಎ.ಟಿ.ಎಂ ಆಗಿ ಸೇವೆ ಸಲ್ಲಿಸಿರಬೇಕು. (ಮತ್ತೊಂದು ಹುದ್ದೆಯ ವಿವರ ಜಾಹೀರಾತಿನ ಬಳಿಕ ಇದೆ)
ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ ಬಿ.ಟೆಕ್/ಎಂಸಿಎ ಮತ್ತು ಕಂಪ್ಯೂಟರ್ ಅಪರೇಟರ್ ಬಿಸಿಎ/ಪದವಿ ಜೊತೆಗೆ ಕಂಪ್ಯೂಟರ್ ಕೌಶಲ್ಯಾ ಹೊಂದಿರಬೇಕು. ಬಿ.ಟೆಕ್ ಎಂಸಿಎ ಆದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು 45 ವರ್ಷ ಮೀರಿರಬಾರದು. ಸ್ನಾತಕ/ಸ್ನಾತಕೋತ್ತರ/ ಪದವಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಅಂತಿಮ ಅಂಕಪಟ್ಟಿ, ಪ.ಜಾ/ಪ.ಪಂ. ಅಭ್ಯರ್ಥಿಯಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಸೇವಾ ಅನುಭವ ಪ್ರಮಾಣ ಪತ್ರ. ಕೆಲಸ ನಿರ್ವಹಿಸಿದ ಸಂಸ್ಥೆಯು ನೀಡಿದ ನೇಮಕಾತಿ ಆದೇಶ ಪತ್ರ. ಕೆಲಸ ನಿರ್ವಹಿಸಿದ ಅವಧಿಗೆ ಸಂಬಂಧ ಪಟ್ಟ ಸಂಸ್ಥೆಯಿಂದ ಹಾಜರಾತಿ ಪ್ರಮಾಣ ಪತ್ರ. ಸಂಸ್ಥೆಯಿಂದ ವೇತನ ದೃಢೀಕರಣ, ವೇತನ ಜಮಾ ಆದ ಕುರಿತು ಬ್ಯಾಂಕ್ ಖಾತೆಯ ವಿವರಗಳ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬೇಕು.
ಇದನ್ನೂ ಓದಿ » ಸಿಗಂದೂರು ಸೇತುವೆ ಮೇಲೆ ಕಾರಿನಲ್ಲಿ ಸಂಸದ ರಾಘವೇಂದ್ರ ಸಂಚಾರ, ಪರಿಶೀಲನೆ ಬಳಿಕ ಹೇಳಿದ್ದೇನು?
ಆಸಕ್ತ ಅಭ್ಯರ್ಥಿಗಳು ಸೂಕ್ತ ವಿದ್ಯಾರ್ಹತೆ ಅನುಭವ ಹಾಗೂ ಕಂಪ್ಯೂಟರ್ ಸಾಕ್ಷರತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರು, ಶಿವಮೊಗ್ಗ ಇವರ ಕಛೇರಿಯಲ್ಲಿ ಪಡೆಯಬೇಕು. ಸ್ವವಿವರಗಳೊಂದಿಗೆ ಮೇ 23 ರೊಳಗಾಗಿ ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಹಳೇ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ-577201 ಇಲ್ಲಿಗೆ ಸಲ್ಲಿಸಬೇಕು ಯೋಜನಾ ನಿರ್ದೇಶಕರು (ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200