ಶಿವಮೊಗ್ಗ: ನಗರದ ಎನ್.ಟಿ. ರಸ್ತೆಯಲ್ಲಿರುವ ಪಿಯರ್‌ಲೈಟ್ ಲೈನರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ತನ್ನ ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡಲು ಉತ್ಸಾಹಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ (hiring). ಫೌಂಡ್ರಿ ಮತ್ತು ಮಿಷಿನ್ ಶಾಪ್ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹರು ನೇರ ಸಂದರ್ಶನ ಅಥವಾ ಅರ್ಜಿ ಸಲ್ಲಿಸಬಹುದಾಗಿದೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಅರ್ಹತೆ ಮತ್ತು ಸೌಲಭ್ಯಗಳು

ಅಭ್ಯರ್ಥಿಗಳ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ವೇತನದ ಜೊತೆಗೆ ಓವರ್ ಟೈಮ್ (O.T), ಇನ್ಸೆಂಟಿವ್, ಪಿ.ಎಫ್ (P.F) ಮತ್ತು ಇ.ಎಸ್.ಐ (E.S.I) ಸೌಲಭ್ಯಗಳು ದೊರೆಯಲಿವೆ. ಗ್ರಾಚ್ಯುಯಿಟಿ ಮತ್ತು ಬೋನಸ್ ಸೌಲಭ್ಯದ ಜೊತೆಗೆ ಹೊರ ಊರಿನಿಂದ ಬರುವ ಅಭ್ಯರ್ಥಿಗಳಿಗೆ ವಸತಿ ಸೌಲಭ್ಯವನ್ನೂ ಸಂಸ್ಥೆ ಒದಗಿಸಲಿದೆ.
ಇದನ್ನೂ ಓದಿ – ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ
ಯಾರನ್ನು ಸಂಪರ್ಕಿಸಬೇಕು?
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹೆಚ್.ಎಂ. ಅರುಣ್ ಕುಮಾರ್ (ಹೆಚ್.ಆರ್ ವಿಭಾಗ), ಮೊಬೈಲ್ ಸಂಖ್ಯೆ: 9606462864, ಇ-ಮೇಲ್:hr@pearlite.in ಸಂಪರ್ಕಿಸಬಹುದು. ಹೆಚ್.ಆರ್.ವಿಭಾಗವನ್ನು ಸಂಪರ್ಕಿಸುವ ಸಮಯ ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ.

