SHIMOGA JOBS : ಮ್ಯಾನೇಜರ್‌ ಸೇರಿದಂತೆ ವಿವಿಧ ಹುದ್ದೆಗೆ ಅರ್ಜಿ ಅಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 19 JULY 2024

SHIMOGA JOBS : ಸೈಂಟ್‌ ಮಿಲಾಗ್ರಿಸ್‌ ಕ್ರೆಡಿಟ್‌ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಶಿವಮೊಗ್ಗ ಜಿಲ್ಲೆಯ ಶಾಖೆಗಳ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಕಾರಾವಾರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಸೊಸೈಟಿ, ರಾಜ್ಯದ 9 ಜಿಲ್ಲೆಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ 111 ಶಾಖೆಗಳನ್ನು ಹೊಂದಿದೆ.

ಯಾವೆಲ್ಲ ಹುದ್ದೆ ಖಾಲಿ ಇದೆ?

ಬ್ರ್ಯಾಂಚ್‌ ಮ್ಯಾನೇಜರ್‌, ಅಸಿಸ್ಟೆಂಟ್‌ ಬ್ರ್ಯಾಂಚ್‌ ಮ್ಯಾನೇಜರ್‌, ಸೀನಿಯರ್‌ ಅಸಿಸ್ಟೆಂಟ್‌ / ಆಫೀಸರ್‌, ಜೂನಿಯರ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಂಬಿಎ / ಎಂ.ಕಾಂ / ಬಿ.ಕಾಂ / ಬಿಬಿಎಂ / ಬಿಬಿಎ ಪದವಿ ಹೊಂದಿರಬೇಕು. ಕಂಪ್ಯೂಟರ್‌ ಜ್ಞಾನ ಇರಬೇಕು.

ಅಟೆಂಡರ್‌ ಹುದ್ದೆಗಳು ಇವೆ. ಎಸ್ಸೆಸ್ಸೆಲ್ಸಿ / ಪಿಯುಸಿ / ಯಾವುದೇ ಪದವಿ ಹೊಂದಿರಬೇಕು.

Shimoga-Jobs-General-Image

ಸಂಬಳ, ಸೌಲಭ್ಯಗಳೇನು?

ಉತ್ತಮ ಸಂಬಳ, ಆಕರ್ಷಕ ಪ್ರೋತ್ಸಾಹಧನ, ಬೋನಸ್‌, ಪಿ.ಎಫ್‌, ಗ್ರಾಚುಟಿ ದೊರೆಯಲಿದೆ. ಅಭ್ಯರ್ಥಿಯ ಅರ್ಹತೆ, ಸಾಮರ್ಥ್ಯ ಮತ್ತು ಅನುಭವದ ಆಧಾರದ ಮೇಲೆ ಉತ್ತಮ ಸಂಬಳ ನೀಡಲಾಗುವುದು. ವಯೋಮಿತಿ 21 ರಿಂದ 40 ವರ್ಷ ಇರಬೇಕು. ಸ್ಥಳೀಯರಿಗೆ ಹಾಗೂ ಪುರುಷ ಅಭ್ಯರ್ಥಿಗಳಿಗೆ ಪ್ರಾಧಾನ್ಯತೆ ಇರಲಿದೆ. ಆಸಕ್ತರು ಅರ್ಜಿ ಸಲ್ಲಿಸಲು ತಮ್ಮ ಬಯೋಡೇಟಾ, 1 ಪಾಸ್ ಪೋರ್ಟ್‌ ಸೈಜ್ ಫೋಟೊದೊಂದಿಗೆ

milagresrecruitment@gmail.com ಗೆ ಇ-ಮೇಲ್ ಮೂಲಕ ಕಳುಹಿಸಬಹುದು ಅಥವಾ ಈ ಕೆಳಗಿನ ವಿಳಾಸಕ್ಕೆ ಕಳಹಿಸಬಹುದು. ವ್ಯವಸ್ಥಾಪಕ ನಿರ್ದೇಶಕರು, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ಸ್‌ ಸೊಸೈಟಿ ಲಿ., ಕಾರವಾರ. ಪ್ರಧಾನ ಕಚೇರಿ: ಕೇಶವ್ ಶೇಟ್ ರೋಡ್, 1st ಕ್ರಾಸ್, ಸೋನಾರ್‌ವಾಡ, ಕಾರವಾರ-581304 ಫೋ: 9538200103

ಇದನ್ನೂ ಓದಿ ⇓

ಬೆಳ್ಳಂಬೆಳಗ್ಗೆ ಶಿವಮೊಗ್ಗ, ಭದ್ರಾವತಿಯಲ್ಲಿ ಲೋಕಾಯುಕ್ತ ದಾಳಿ, ಯಾರ ಮನೆ ಮೇಲೆ ದಾಳಿಯಾಗಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : July 19, 2024

Leave a Comment