SHIVAMOGGA LIVE NEWS | 3 NOVEMBER 2023
SHIMOGA : ಕ್ರಾಂತಿದೀಪ ಪತ್ರಿಕೆಯ ಮುದ್ರಣಾಲಯವನ್ನು (Printing Press) ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಕ್ರಾಂತಿದೀಪ ಪತ್ರಿಕೆ ಕಾರ್ಯಾಲಯದಲ್ಲಿ ಮುದ್ರಣಾಲಯಕ್ಕೆ ಚಾಲನೆ ನೀಡಲಾಯಿತು.
ಯಾರೆಲ್ಲ ಏನೇನು ಹೇಳಿದರು?
ಯಾವುದೇ ಪತ್ರಿಕೆಯ ಹುಟ್ಟಿಗೆ ಒಂದು ಬಲವಾದ ಕಾರಣವಿರುತ್ತದೆ. ಅಂತಹ ಕಾರಣ ಕ್ರಾಂತಿದೀಪಕ್ಕೂ ಇದೆ. 39 ವರ್ಷಗಳಿಂದ ಪತ್ರಿಕೆ ನಡೆದು ಬಂದಿದೆ ಎಂದರೆ ಜನರ ವಿಶ್ವಾಸ ಗಳಿಸಿದೆ ಎಂದೇ ಅರ್ಥ.ಮಧು ಬಂಗಾರಪ್ಪ, ಸಚಿವ
ನಮ್ಮ ಮುಖ ಹೇಗಿದೆ ಎಂಬುದಕ್ಕೆ ಕನ್ನಡಿ ನೋಡುತ್ತೇವೆ. ಅದೇ ರೀತಿ ಸಮಾಜ ಹೇಗಿದೆ ಎಂಬುದಕ್ಕೆ ಪ್ರತಿದಿನ ಪತ್ರಿಕೆ ಓದುತ್ತೇವೆ. ಪ್ರಸ್ತುತ ದಿನಗಳಲ್ಲಿ ಕೆಲ ಪತ್ರಿಕೆಗಳು ತಮ್ಮ ಸೃಜನಶೀಲತೆ ಕಳೆದುಕೊಳ್ಳುತ್ತಿವೆ. ಸುದ್ದಿ ವಿಚಾರದಲ್ಲಿ ರಾಜೀ ಮಾಡಿಕೊಳ್ಳದೆ ನೈಜ ಸಂಗತಿಯನ್ನಷ್ಟೆ ಪತ್ರಿಕೆಗಳು ತಿಳಿಸಬೇಕು.ಕಿಮ್ಮನೆ ರತ್ನಾಕರ್, ಮಾಜಿ ಸಚಿವ
ಕ್ರಾಂತಿದೀಪ ಪತ್ರಿಕೆ ಸಂಪಾದಕ ಮಂಜುನಾಥ್ ಅವರು ಮುದ್ರಾಣಾಲಯ ಆರಂಭಿಸುತ್ತಿರುವುದು ಓದುಗರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಓದುಗರ ವಿಶ್ವಾಸ ಮತ್ತಷ್ಟು ಗಟ್ಟಿಯಾಗುವಂತೆ ಮಾಡಲಾಗಿದೆ.ಗಂಗಾಧರ್ ಹಿರೇಗುತ್ತಿ, ಕರಾವಳಿ ಮುಂಜಾವು ಪತ್ರಿಕೆ
ಸಂಪಾದಕರು ಆದುನಿಕ ತಂತ್ರಜ್ಞಾನಕ್ಕೆ ತಕ್ಕಹಾಗೆ ಬದಲಾವಣೆಯಾಗಬೇಕು. ಪತ್ರಿಕೆಗಳು ಸುದ್ದಿಯ ನೈಜತೆಯನ್ನು ಉಳಿಸಿಕೊಳ್ಳಬೇಕು.ನಾಗರಾಜ್, ಈಶಾನ್ಯ ಟೈಮ್ಸ್ ಸಂಪಾದಕ
ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್.ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ, ಮಾಜಿ ಮೇಯರ್ ಮರಿಯಪ್ಪ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಗೋಪಿನಾಥ್, ಶೇಷಾಛಲ, ವಕೀಲ ಶ್ರೀಪಾಲ್, ಕಾಂಗ್ರೆಸ್ ಮುಖಂಡ ಎಸ್.ಪಿ.ದಿನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ – SHIMOGA JOBS | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸ, ಸ್ಟಾರ್ ಏರ್ನಿಂದ ನೇರ ಸಂದರ್ಶನ, ಯಾವಾಗ? ಎಲ್ಲಿ?
