SHIVAMOGGA LIVE NEWS | 23 MAY 2023
SORABA : ತಾಲೂಕಿನ ವಿವಿಧ ಮಳಿಗೆಗಳಲ್ಲಿ ಕಾರ್ಮಿಕ ಇಲಾಖೆ (labour department) ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದರು. ಈ ವೇಳೆ ಮಳಿಗೆಯೊಂದರಲ್ಲಿ ಬಾಲ ಕಾರ್ಮಿಕ ಪತ್ತೆಯಾಗಿದ್ದು, ಪ್ರಕರಣ ದಾಖಲು ಮಾಡಲಾಗಿದೆ.
ಕಾರ್ಮಿಕ ನೀರಿಕ್ಷಕರಾದ ಶಿಲ್ಪಾ, ಯೋಜನಾ ನಿರ್ದೇಶಕ ರಘುನಾಥ ಹಾಗೂ ಪೊಲೀಸ್ ಸಿಬ್ಬಂದಿ ರವಿ ಅವರು ವಿವಿಧ ತಪಾಸಣೆ ನಡೆಸಿದರು. ಈ ವೇಳೆ ಮಳಿಗೆಯೊಂದರಲ್ಲಿ ಬಾಲ ಕಾರ್ಮಿಕ ಪತ್ತೆಯಾಗಿದ್ದಾನೆ. ಆನವಟ್ಟಿ ಠಾಣೆಯಲ್ಲಿ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ – ಭದ್ರಾ ನಾಲೆಯಲ್ಲಿ ಮುಂದುವರೆದ ಸರ್ಚ್ ಆಪರೇಷನ್, ಇಬ್ಬರ ಮೃತದೇಹ ಪತ್ತೆ, ಹೇಗಾಯ್ತು ಘಟನೆ?
ಇನ್ನು, ತಾಲೂಕಿನ ವಿವಿಧೆಡೆ ತಪಾಸಣೆ ವೇಳೆ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದರ ಪರಿಣಾಮದ ಕುರಿತು ಅಧಿಕಾರಿಗಳು (labour department) ತಿಳಿವಳಿಕೆ ಮೂಡಿಸಿದರು.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ