ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 9 ಮೇ 2020
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಟೋ ಚಾಲಕರಿಗೆ ಪರಿಹಾರ ಘೋಷಿಸಿದ ಮರುದಿನವೇ ಮಧ್ಯವರ್ತಿಗಳು ಅರ್ಜಿ ಸಲ್ಲಿಸುವ ನೆಪದಲ್ಲಿ ಆಟೋ ಚಾಲಕರಿಂದ ಹಣ ಕೀಳುತ್ತಿದ್ದಾರೆ ಎಂದು ಸ್ಮಾರ್ಟ್ ಸಿಟಿ ಆಟೋ ಚಾಲಕರ ಸಂಘದ ಅಧ್ಯಕ್ಷ ಡಿ.ಕೃಷ್ಣಪ್ಪ ಆರೋಪಿಸಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಹಾರ ಧನಕ್ಕಾಗಿ ಅರ್ಜಿ ಸಲ್ಲಿಸಬೇಕೆಂದು ಸುಳ್ಳುಸುದ್ದಿ ಹಬ್ಬಿಸುತ್ತಿದ್ದು, ಸರ್ಕಾರದಿಂದ ಮಾರ್ಗಸೂಚಿ ಬಂದ ನಂತರ ಅರ್ಜಿ ಸಲ್ಲಿಸುವಂತೆ ಆಟೋ ಚಾಲಕರಲ್ಲಿ ಮನವಿ ಮಾಡಿದರು.
ಲಾಕ್ಡೌನ್ನಿಂದಾಗಿ ಆಟೋ ಚಾಲಕರು ಹಸಿವನ್ನು ನೀಗಿಸುವ ದೃಷ್ಠಿಯಿಂದ ಮುಖ್ಯ ಮಂತ್ರಿಗಳು ಪರಿಹಾರವನ್ನು ಘೋಷಿಸಿದ್ದು, ಪ್ರತಿಯೊಬ್ಬ ಆಟೋ ಚಾಲಕರನ್ನು ಗುರುತಿಸಿ ಪರಿಹಾರ ತಲುಪಿಸುವ ಕಾರ್ಯವಾಗಬೇಕು ಹಾಗೂ ಯಾವುದೇ ಆಟೋ ಚಾಲಕರನ್ನು ಕೈ ಬಿಡದೇ ನಿರ್ಲಕ್ಷಿಸಬಾರದು ಎಂದರು.
ಕರೋನಾ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಆಟೋ ಚಾಲಕರಿಗೆ ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಗರದ ಅಭಿನಂದಿಸಿದರು.
ಕೆ.ಎಸ್.ಚಿದಾನಂದ, ಪಂಚಾಕ್ಷರಿ, ಭೋಜರಾಜ್, ದಯಾನಂದ್, ಮಂಜುನಾಥ್, ರಾಜು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]