ಶಿವಮೊಗ್ಗ ಲೈವ್.ಕಾಂ | SHIMOGA | 15 ಜನವರಿ 2020
ಶಿವಮೊಗ್ಗದ ಮಿಳಘಟ್ಟ ರಸ್ತೆಯಲ್ಲಿ ಬೈಕ್ ಮತ್ತು ಸಿಟಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತನನ್ನು ಸಾದಿಕ್ (31) ಎಂದು ಗುರುತಿಸಲಾಗಿದೆ. ಅಪಘಾತದ ಸ್ಥಳದಲ್ಲೇ ಸಾದಿಕ್ ಕೊನೆಯುಸಿರೆಳೆದಿದ್ದಾರೆ.
ಅಪಘಾತವಾಗುತ್ತಿದ್ದಂತೆ ಸಾರ್ವಜನಿಕರು ಗುಂಪುಗೂಡಿದ್ದಾರೆ. ಅಲ್ಲದೆ ಸಿಟಿ ಬಸ್’ಗೆ ಕಲ್ಲು ತೂರಿದ್ದಾರೆ. ಗಾಜು ಪುಡಿ ಪುಡಿಯಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಘಟನೆಯಿಂದಾಗಿ ಮಿಳಘಟ್ಟ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಬ್ಧವಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ ಬಳಿಕ, ವಾಹನಗಳ ಸಂಚಾರ ಆರಂಭವಾಯಿತು.
READ ALSO
- ಮಗು ಮೃತದೇಹ ಕಚ್ಚಿಕೊಂಡು ಶಿವಮೊಗ್ಗದ ಆಸ್ಪತ್ರೆ ಆವರಣದಲ್ಲಿ ಓಡಾಡಿದ ನಾಯಿ, ಯಾರ ಮಗು?
- ಬಾಳೆಬರೆ ಘಾಟ್, ಇನ್ನೂ 10 ದಿನ ವಾಹನ ಸಂಚಾರ ನಿಷೇಧ
- ತೀರ್ಥಹಳ್ಳಿ ಕಾಂಗ್ರೆಸ್ ಟಿಕೆಟ್ ಗೊಂದಲ ಕ್ಲಿಯರ್, ಡಿಕೆಶಿ ನೇತೃತ್ವದಲ್ಲಿ ಸಂಧಾನ ಸಭೆ ಸಕ್ಸಸ್, ಏನಾಯ್ತು ಚರ್ಚೆ?
- ಪಿಳ್ಳಂಗಿರಿಯಲ್ಲಿದ್ದ ಮತಗಟ್ಟೆ ಬದಲಾವಣೆ, ಹೊಸ ಮತಗಟ್ಟೆ ಎಲ್ಲಿದೆ?
- ಶಿವಮೊಗ್ಗದ ಇಂಡಸ್ಟ್ರಿಯಲ್ ಏರಿಯಾದ ಸಂಸ್ಥೆಯೊಂದರ ವಿರುದ್ಧ ಜಿಂದಾಲ್ ಕಂಪನಿ ದೂರು, ಕಾರಣವೇನು?