ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 MAY 2024
SHIMOGA : ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ತಾಯಿ ಎದೆ ಹಾಲು (Mothers Milk) ಸಂಗ್ರಹಣೆ ಮತ್ತು ವಿತರಣೆ ಕೇಂದ್ರ ‘ಅಮೃತಧಾರೆ’ಯನ್ನು ಸಿಮ್ಸ್ ನಿರ್ದೇಶಕ ಡಾ. ವಿ.ವಿರೂಪಾಕ್ಷ ಮಂಗಳವಾರ ಉದ್ಘಾಟಿಸಿದರು.
ಜಾಹೀರಾತು ಶಿವಮೊಗ್ಗದಲ್ಲಿ ಮನೆ ಸಾಲ ಮತ್ತು ಇತರೆ ಲೋನ್ಗಳನ್ನು ಪಡೆಯುವುದು ಈಗ ಸುಲಭ. ಕರೆ ಮಾಡಿ 9972194422
ಎಲ್ಲಾ ಆರೋಗ್ಯವಂತ ತಾಯಿಯಂದಿರು ತಮ್ಮ ಮಗುವಿಗೆ ಉಣಿಸಿ ಹೆಚ್ಚಾದ ಎದೆ ಹಾಲನ್ನು ಅಮೃತಧಾರೆ ಎದೆಹಾಲು ಸಂಗ್ರಹ ಕೇಂದ್ರಕ್ಕೆ ದಾನ ನೀಡಬಹುದಾಗಿದೆ. ಇದನ್ನು ಕೆಲವು ತಾಯಂದಿರಲ್ಲಿ ಹಾಲು ಉತ್ಪತ್ತಿಯಾಗದಿದ್ದರೆ. ತೀವ್ರ ನಿಗಾ ಘಟಕದ ಕೇಂದ್ರದಲ್ಲಿ ದಾಖಲಾದ ತಾಯಿಯ ಮಗುವಿಗೆ ಅಥವಾ ನವಜಾತ ಶಿಶು ಕೇಂದ್ರದಲ್ಲಿದ್ದ ಮಗುವಿಗೆ ಅಥವಾ ಹೆರಿಗೆ ಸಮಯದಲ್ಲಿ ತಾಯಿ ಮೃತರಾದ ಮಗುವಿಗೆ ಹಾಲನ್ನು ಉಪಯೋಗ ಮಾಡಿ ಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಎದೆಹಾಲು ನೀಡುವು ದರಿಂದ ನವಜಾತ ಶಿಶುವಿಗೆ ನೀಡುವ ಫಾರ್ಮುಲ ಫೀಡ್ ತಪ್ಪಿಸಬಹುದಾಗಿದೆ. ಇದರಿಂದ ಕರುಳಿನ ಬೇನೆ, ನಂಜು, ಕಣ್ಣಿನ ದೋಷ ತಡೆಯಬಹುದಾಗಿದೆ. ನವಜಾತ ಶಿಶು ಆಸ್ಪತ್ರೆಯಲ್ಲಿ ಇರಬೇಕಾದ ಸಮಯ ಕಡಿಮೆಯಾಗುತ್ತದೆ. ಎದೆಹಾಲು ನೀಡುವುದರಿಂದ ಮಗುವಿಗೆ ಪೋಷಕಾಂಶ, ಮೆದುಳು ಚುರುಕು ಮತ್ತು ನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧಿಕ್ಷರಾದ ಡಾ. ಟಿ.ಡಿ ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿದ್ದನಗೌಡ, ಮುಖ್ಯಸ್ಥ ಡಾ. ಹಾಲೇಶ್, ಮಿಣಿ ಜೀವಶಾಸ್ತ್ರಜ್ಞ ಡಾ. ರವೀಂದ್ರ ಪಾಟೀಲ್, ಮಕ್ಕಳ ವಿಭಾಗದ ಮುಖ್ಯಸ್ಥ ಟಿ.ಹೆಚ್.ಓ ಚಂದ್ರಶೇಖರ್, ನೋಡಲ್ ಆಪೀಸರ್ ಡಾ. ವಸಂತ ಹಾಗೂ ಶ್ರೀಮತಿ ಅನ್ನಪೂರ್ಣ, ಶುಶ್ರೂಷಾಧೀಕ್ಷಕರು ಹಾಜರಿದ್ದರು.
ಇದನ್ನೂ ಓದಿ – ಇನ್ನೊಂದೇ ತಿಂಗಳು ಬಾಕಿ, ಆಧಾರ್ ಕಾರ್ಡ್ ಅಪ್ಡೇಟ್ಗೆ ಸರ್ಕಾರದಿಂದ ಆಫರ್, ಏನದು?
ಶಿವಮೊಗ್ಗ ಲೈವ್.ಕಾಂ