ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 10 ಜುಲೈ 2019
ಭಾರೀ ಮಳೆಯ ನಡುವೆಯೂ ಹೊಸನಗರದ ನಗರ ಹೋಬಳಿಯಲ್ಲಿ ಶರಾವತಿ ನದಿಗಾಗಿ ಬಂದ್ ಆಚರಿಸಲಾಯಿತು. ನಗರದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆ ಕಾರ್ಯಕರ್ತರು, ಸಾರ್ವಜನಿಕರು, ಟೈರ್’ಗೆ ಬೆಂಕಿ ಹಚ್ಚಿ, ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ನಗರದ ವಿವಿಧೆಡೆ ಬೈಕ್ ಜಾಥಾ ನಡೆಸಲಾಯಿತು. ಶರಾವತಿ ನದಿ ಪರವಾಗಿ ಘೋಷಣೆ ಕೂಗಿದ ಜನರು, ಸರ್ಕಾರ ಡಿಪಿಆರ್ ಸಿದ್ಧಪಡಿಸುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನಗರದ ನಾಡ ಕಚೇರಿ, ಬ್ಯಾಂಕ್, ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
https://www.facebook.com/liveshivamogga/videos/654283931752565/
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]