ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಎಲೆಕ್ಟ್ರಾನಿಕ್ ತೂಕದ ಯಂತ್ರ ಬಹಿರಂಗ ಹರಾಜು

SHIMOGA : ಅಕ್ರಮವಾಗಿ ಇರಿಸಿಕೊಂಡಿದ್ದ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಪತ್ತೆಹಚ್ಚಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಅಗತ್ಯ ವಸ್ತುಗಳ ಕಾಯ್ದೆಯಡಿ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಈ ತೂಕದ ಯಂತ್ರವನ್ನು ಫೆ. 16 ರಂದು ಬೆಳಿಗ್ಗೆ 11.30 ಕ್ಕೆ ಶಿವಮೊಗ್ಗ ಗೋಪಾಳದ ಅನೌಪಚಾರಿಕ ಪಡಿತರ ಪ್ರದೇಶ, ಸಹಾಯಕ ನಿರ್ದೇಶಕರ ಸಮಕ್ಷಮ ಬಹಿರಂಗ ಹರಾಜು ಮಾಡಲಾಗುವುದು. ಹರಾಜಿನಲ್ಲಿ ಭಾಗವಹಿಸಲು ಆಸಕ್ತರಿರುವ ಎಪಿಎಂಸಿ ಪರವಾನಗಿ ಹೊಂದಿರುವ ಬಿಡ್ಡುದಾರರು ಷರತ್ತುಗಳಿಗೆ ಒಳಪಟ್ಟು ಭದ್ರತಾ ಠೇವಣಿ ಪಾವತಿಸಿ ಗೊತ್ತುಪಡಿಸಿದ ದಿನಾಂಕದಂದು ಒಂದು ಗಂಟೆ ಮುಂಚಿತವಾಗಿ ಹಾಜರಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – ರಾತ್ರಿ ಗಲಾಟೆ ವೇಳೆ ಪಿಸ್ತೂಲು ಪ್ರದರ್ಶನ, ಜನರಲ್ಲಿ ಆತಂಕ, ಪೊಲೀಸರ ಮುಂದೆ ಪಿಸ್ತೂಲ್‌ನ ಅಸಲಿ ಕಥೆ ಬಹಿರಂಗ
LATEST NEWS
- ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್‌ಗೆ ಒಂದೂವರೆ ವರ್ಷದ ಮಗು ಬಲಿ

- ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್, ದಾಖಲಾಯ್ತು ಕೇಸ್

- ಗುಡ್ಡೇಕಲ್ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

- ಭದ್ರಾವತಿಯ ಭದ್ರಾ ನದಿಗೆ ರಾಶಿ ರಾಶಿ ತ್ಯಾಜ್ಯ, ವೈಜ್ಞಾನಿಕ ಕ್ರಮಕ್ಕೆ ಒತ್ತಾಯ

- ಯಶವಂತಪುರ – ತಾಳಗುಪ್ಪ ಮಧ್ಯೆ ವಿಶೇಷ ರೈಲು, ಎಷ್ಟು ಬೋಗಿ ಇರುತ್ತೆ? ಎಲ್ಲೆಲ್ಲಿದೆ ಸ್ಟಾಪ್?

About The Editor
ನಿತಿನ್ ಆರ್.ಕೈದೊಟ್ಲು

















