SHIVAMOGGA LIVE | 29 JUNE 2023
ನಾನು ಹಾಗೆ ಹೇಳೆ ಇಲ್ಲ
SHIMOGA : ವಲಸಿಗರಿಂದ ಬಿಜೆಪಿಗೆ ಸಮಸ್ಯೆಯಾಗಿದೆ ಎಂಬ ಅರ್ಥದಲ್ಲಿನ ಹೇಳಿಕೆ ವಿವಾದ ಭುಗಿಲೇಳುತ್ತಿದ್ದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದಾರೆ. ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಬಾಂಬೆ ಬಾಯ್ಸ್ ಎಂಬ ಪದವನ್ನೆ ಬಳಸಿಲ್ಲ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಕಾಂಗ್ರೆಸ್ ಗಾಳಿ ಬೀಸಿದ್ದರಿಂದ ಬಿಜೆಪಿ ಮುಖಂಡರು ಅಶಿಸ್ತಿನ ವರ್ತನೆ ತೋರುತ್ತಿರಬಹುದು ಎಂದು ನಾನು ಹೇಳಿದ್ದೆ. ಸುದ್ದಿ ವಾಹಿನಿಯೊಂದರಲ್ಲಿ (News Channel) ತಪ್ಪಾಗಿ ಸುದ್ದಿ ಬಂದಿದೆ. ಇದರಿಂದ ಪಕ್ಷದಲ್ಲಿ ಅನೇಕರಿಗೆ ಬೇಸರವಾಗಿದೆ. ಕಾಂಗ್ರೆಸಿಗರು ನಮ್ಮ ಪಕ್ಷಕ್ಕೆ ಬಂದಿದ್ದರಿಂದಲೆ ನಾನು ಮಂತ್ರಿಯಾಗಿದ್ದು ಎಂದು ತಿಳಿಸಿದರು.
ಇದನ್ನೂ ಓದಿ – ಸಿಗಂದೂರು ಲಾಂಚ್ ಇನ್ನು ಮೂರ್ನಾಲ್ಕು ದಿನದಲ್ಲಿ ಬಂದ್, ಯಾಕೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಹಸೆಮಣೆ ಏರಿದ ಮಂಜುನಾಥ ಗೌಡರ ಮಕ್ಕಳು
ANANDAPURA | ತಂದೆಯನ್ನು ಕಳೆದುಕೊಂಡ ನೋವಿನಲ್ಲಿಯು ಸಹೋದರಿಯರು ಹಸೆಮಣೆ ಏರಿದರು. ಆನಂದಪುರ ಬಳಿ ಸಂಭವಿಸದ ಕಾರು ಅಪಘಾತದಲ್ಲಿ ಬಸವಾಸಿಯ ಮಂಜುನಾಥ ಗೌಡ ಸಾವನ್ನಪ್ಪಿದ್ದರು. ಇಬ್ಬರು ಹೆಣ್ಣು ಮಕ್ಕಳ ಮದುವೆ ಹಿಂದಿನ ದಿನ ಘಟನೆ ಸಂಭವಿಸಿತ್ತು. ಜೂ.27ರ ಮಧ್ಯೆ ರಾತ್ರಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಜೂ.28ರಂದು ಮಂಜುನಾಥ ಗೌಡ ಅವರ ಇಬ್ಬರು ಹೆಣ್ಣು ಮಕ್ಕಳು ಹಸೆ ಮಣೆ ಏರಿದರು. ಸಂಬಂಧಿಕರು, ವರನ ಕುಟುಂಬದವರ ನಡೆಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ.
ಗಾಂಜಾ, ಹಣ, ಕಾರು ಸಹಿತ ಇಬ್ಬರು ಅರೆಸ್ಟ್
SHIMOGA : ತುಂಗಾ ಚಾನಲ್ ಬಳಿ ಕಾರು ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. 35 ಸಾವಿರ ರೂ ಮೌಲ್ಯದ ಗಾಂಜಾ, 1500 ರು. ನಗದು, ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ. ಸಾಗರ ರಾಮನಗರದ ಅಲ್ತಾಫ್ ಮತ್ತು ಆಯನೂರಿನ ಸಯ್ಯದ್ ಯಾಸೀನ್ ಬಂಧಿತರು. ಡಿಸಿಆರ್ಬಿ ಡಿವೈಎಸ್ಪಿ ಮೇಲ್ವಿಚಾರಣೆಯಲ್ಲಿ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಎಂ.ಎಸ್.ದೀಪಕ್, ಪಿಎಸ್ಐ ಮಂಜುನಾಥ್, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರದಲ್ಲಿ ಅಂಗನಾಡಿ ಕಾರ್ಯಕರ್ತೆಯರ ಪ್ರತಿಭಟನೆ
SAGARA : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾಗರ ತಹಶೀಲ್ದಾರ್ ಕಚೇರಿ ಮುಂಬಾಗ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಕಳಪೆ ಮೊಬೈಲ್ ನೀಡಿದ್ದು, ಅದನ್ನು ಸರ್ಕಾರ ಹಿಂಪಡೆದು ಹೊಸ ಮೊಬೈಲ್ ಕೊಡಬೇಕು. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ಕ್ರಮವಾಗಿ ಮಾಸಿಕ 15 ಸಾವಿರ ರೂ ಮತ್ತು 10 ಸಾವಿರ ರೂ. ಗೌರವಧನ ಹೆಚ್ಚಳ ಮಾಡಬೇಕು ಸೇರಿದಂತೆ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ – 10 ಸಾವಿರ ರೂ. ಹೂಡಿಕೆ, ಕೆಲವೇ ನಿಮಿಷದಲ್ಲಿ 16 ಸಾವಿರ ರೂ. ಗಳಿಕೆ, ನಂಬಿದ ತೀರ್ಥಹಳ್ಳಿ ಗೃಹಿಣಿಗೆ ಕಾದಿತ್ತು ಬಿಗ್ ಶಾಕ್
ಜು.3ರಂದು ಫಕೀರೇಶ್ವರ ಜಾತ್ರೆ
SHIMOGA : ಗಾಡಿಕೊಪ್ಪದ ಪುರದಾಳು ರಸ್ತೆಯ ಶ್ರೀ ಫಕೀರೇಶ್ವರ ಭಾವೈಕ್ಯ ಶಾಖಾಮಠದಲ್ಲಿ ಜುಲೈ 3 ರಂದು 6ನೇ ವರ್ಷದ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ. ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ, ಖಾಜಿ ಸೈಯದ್ ಷಾ ಮಹಮದ್ ಖಾದ್ರಿ ಅವರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮಹಾ ಮಂಗಳರಾತಿ ನೆರವೇರಲಿದ್ದು, ಸಾರ್ವಜನಿಕ ಅನ್ನ ಸಂತರ್ಪಣೆ ಇರಲಿದೆ. ಸಂಜೆ ಶ್ರೀ ನಾಗಚೌಡೇಶ್ವರಿ ದೇವಿ ಪ್ರತಿಷ್ಠಾಪನೆ, ಭಾವೈಕ್ಯ ಸಮ್ಮೇಳನ, ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ.