SHIVAMOGGA LIVE NEWS, 3 FEBRUARY 2025
ಆಶ್ರಯ ಸಮಿತಿಗೆ ನಾಲ್ವರ ನೇಮಕ
ಶಿವಮೊಗ್ಗ : ಮಹಾನಗರ ಪಾಲಿಕೆ ವ್ಯಾಪ್ತಿಯ ಆಶ್ರಯ ಸಮಿತಿಗೆ ನಾಲ್ವರು ಸದಸ್ಯರನ್ನು ಸರ್ಕಾರ ನೇಮಕ (Appointed) ಮಾಡಿ ಆದೇಶಿಸಿದೆ. ಮಂಜುನಾಥ ಬಾಬು, ಯಮುನಾ ರಂಗೇಗೌಡ, ಅಬ್ದುಲ್ ಮಜೀದ್, ಕೆ.ಲಕ್ಷ್ಮಣ್ ಅವರನ್ನು ನೇಮಿಸಲಾಗಿದೆ. ನೂತನ ಸದಸ್ಯರು ಇಂದು ಬೆಳಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ » ಗೃಹಪ್ರವೇಶಕ್ಕೆ ತೆರಳಲು ರೆಡಿಯಾಗಲು ಬೀರು ತೆಗೆದ ಗೃಹಿಣಿಗೆ ಕಾದಿತ್ತು ಆಘಾತ, ಆಗಿದ್ದೇನು?
ವಾಹನ ಡಿಕ್ಕಿ, ಜಿಂಕೆ ಸಾವು
ಸೊರಬ : ಉಳುವಿ – ಶಿರಾಳಕೊಪ್ಪ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಜಿಂಕೆ ಸಾವನ್ನಪ್ಪಿದೆ. ದಟ್ಟ ಅರಣ್ಯದ ಮಧ್ಯೆ ರಸ್ತೆ ಇದೆ. ಜಿಂಕೆ ಹಿಂಡು ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ದಾರಿ ಹೋಕರು ಗಾಯಗೊಂಡಿದ್ದ ಜಿಂಕೆಗೆ ಆರೈಕೆ ಮಾಡಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ಜಿಂಕೆ ಮೃತಪಟ್ಟಿತ್ತು.
ಇದನ್ನೂ ಓದಿ » ಅಡಿಕೆ ತೋಟದಲ್ಲಿ ನೇಣು ಬಿಗಿದುಕೊಂಡ ರೈತ
ತುಂಗಾ ಜಲಾಶಯಕ್ಕೆ 11 ಲಕ್ಷ ಮೀನು ಮರಿಗಳು
ಶಿವಮೊಗ್ಗ : ಮೀನುಗಳ ಸಂತತಿ ಅಭಿವೃದ್ಧಿಗಾಗಿ ವಿವಿಧ ತಳಿಯ 11.30 ಲಕ್ಷ ಮೀನು ಮರಿಗಳನ್ನು ಶಾಸಕ ಆರಗ ಜ್ಞಾನೇಂದ್ರ ತುಂಗಾ ನದಿಗೆ ಬಿಡಲಾಯಿತು. ಸಕ್ರೆಬೈಲು ಆನೆ ಬಿಡಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೀನು ಮರಿಗಳನ್ನ ನದಿಗೆ ಬಿಡಲಾಯಿತು. ಜಲಾಶಯದಲ್ಲಿ ಮೀನುಗಾರಿಕೆ ಮಾಡುತ್ತಿರುವ 8 ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು ವಿತರಿಸಲಾಯಿತು. ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಗಿರೀಶ್.ಓ, ಮೀನುಗಾರಿಕೆ ಉಪ ನಿರ್ದೇಶಕ ಜಿ.ಎಂ.ಶಿವಕುಮಾರ್, ಸಹಾಯಕ ನಿರ್ದೇಶಕ ರಾಘವೇಂದ್ರ ಕೆ.ಎಸ್ ಹಾಗೂ ಗಂಗ ಪರಮೇಶ್ವರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ನಿಂತಿದ್ದ ಬಸ್ಸಿಗೆ ಕಾರು ಡಿಕ್ಕಿ, ಶಾಹಿ ಗಾರ್ಮೆಂಟ್ಸ್ ಸಿಬ್ಬಂದಿ ಸಾವು
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200